ಬಾಗಲಕೋಟೆ: ಕೈಮಗ್ಗ ಮತ್ತು ಜವಳಿ ಇಲಾಖೆಯು ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಕೈಮಗ್ಗ ನೇಕಾರರಿಗೆ ದುಡಿಮೆ ಬಂಡವಾಳ ಸಾಲ ಒದಗಿಸುವ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಯೋಜನೆಯಡಿ ಜಿಲ್ಲೆಯ ಕೈಮಗ್ಗ ನೇಕಾರರಿಗೆ ರಾಷ್ಟ್ರೀಕೃತ ಬ್ಯಾಂಕ್ಗಳಿಂದ ಸಾಲ ಒದಗಿಸಲಾಗುತ್ತದೆ.

ಈ ಯೋಜನೆಯಡಿ ಶೇ6ರ ಬಡ್ಡಿ ದರದಲ್ಲಿ ಕೈಮಗ್ಗ ನೇಕಾರರಿಗೆ ರಾಷ್ಟೀಕೃತ ಬ್ಯಾಂಕುಗಳಿಂದ ಸಾಲ ಒದಗಿಸಲಾಗುತ್ತದೆ. ಬ್ಯಾಂಕಿನವರು ವಿಧಿಸುವ ಸಾಲದ ಮೇಲಿನ ಗರಿಷ್ಠ ಬಡ್ಡಿ ದರ ಶೇ7ಅನ್ನು ಸಾಲ ಮಂಜೂರಾದ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಕೇಂದ್ರ ಸರ್ಕಾರವು ಬಡ್ಡಿ ಸಹಾಯ ಧನ ನೀಡಲಿದೆ.

ಸಾಲದ ಮೊಬಲಗಿನ ಶೇ20 ಗರಿಷ್ಠ ₹10 ಸಾವಿರ ಮಾರ್ಜಿನ್ ಮನಿ ಹಣವನ್ನು ಸಾಲ ವಿತರಿಸಿದ ಬ್ಯಾಂಕಿನ ವ್ಯವಸ್ಥಾಪಕರು ಜಿಲ್ಲೆಯ ನೋಡಲ್ ಕಚೇರಿ ಪಂಜಾವ್ ನ್ಯಾಷನಲ್ ಬ್ಯಾಂಕಿನ ಮೂಲಕ ಪಡೆಯಬಹುದಾಗಿದೆ.

ಗರಿಷ್ಠ 50 ಸಾವಿರ ಸಾಲ ಒದಗಿಸಲಾಗುತ್ತದೆ. ಸಾಲ ಪಡೆಯಲು ಉದ್ದೇಶಿಸಿರುವ ಕೈಮಗ್ಗ ನೇಕಾರರು ಅರ್ಜಿಗಳನ್ನು ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಬಾಗಲಕೋಟೆ ಕಚೇರಿಯಿಂದ ಪಡೆದು ಮೇ 30 ರೊಳಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ. ಮಾಹಿತಿಗೆ ದೂ.ಸಂ.08354-235463ಗೆ ಸಂಪರ್ಕಿಸಬಹುದಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-19-482603970

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.