ಬೈಲಹೊಂಗಲ: ವರ್ತಿ ಸಿದ್ಧಬಸವೇಶ್ವರ ಸೊಸೈಟಿಯು ₹ 51.29 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಅಭಿವೃದ್ಧಿ ಪಥದತ್ತ ಸಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಬಾಬು ಕುಡಸೋಮಣ್ಣವರ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸದಸ್ಯರ ಒಟ್ಟು ಸಂಖ್ಯೆ 3,235, ₹ 1.25 ಕೋಟಿ ಷೇರು ಬಂಡವಾಳ, ₹ 34.11 ಕೋಟಿ ಮೊತ್ತದ ಠೇವುಗಳು, ₹ 2.81 ಕೋಟಿ ಮೊತ್ತದ ಒಟ್ಟು ನಿಧಿ, ₹ 9.49 ಕೋಟಿ ಮೊತ್ತದ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಗುಂತಾವಣೆ, ₹ 28.24 ಕೋಟಿ ಸಾಲ, ₹ 39.64 ಕೋಟಿ ಮೊತ್ತದ ದುಡಿಯುವ ಬಂಡವಾಳ’ ಇದೆ ಎಂದರು.

‘ಸೊಸೈಟಿ ಪ್ರಗತಿಗೆ ಮಾಜಿ ಅಧ್ಯಕ್ಷರಾಗಿದ್ದ ದಿ.ಬಿ.ಎಂ.ಕುಡಸೋಮಣ್ಣವರ, ಮಾಜಿ ಉಪಾಧ್ಯಕ್ಷರಾಗಿದ್ದ ದಿ.ಗಂಗಪ್ಪ ಬೋಳಣ್ಣವರ ಹಗಲಿರುಳು ಶ್ರಮಿಸಿದ್ದಾರೆ. ಸೊಸೈಟಿಯ ಅಭಿವೃದ್ಧಿಗೆ ಆಡಳಿತ ಮಂಡಳಿಯ ಎಲ್ಲ ಸದಸ್ಯ, ಸಿಬ್ಬಂದಿ, ಗ್ರಾಹಕರ ಪಾತ್ರ ಹಿರಿದಾಗಿದೆ. ಸೊಸೈಟಿ ಆರಂಭವಾಗಿ 28 ವರ್ಷಗಳು ಗತಿಸಿದ್ದು, 29ರ ಸಂಭ್ರಮದಲ್ಲಿದೆ’ ಎಂದರು.

ಉಪಾಧ್ಯಕ್ಷ ಮಲ್ಲಿಕಾರ್ಜುನ ಬೋಳಣ್ಣವರ, ನಿರ್ದೇಶಕರಾದ ಬಸವರಾಜ ಕುಡಸೋಮಣ್ಣವರ, ರುದ್ರಪ್ಪ ಕತ್ತಿ, ಮಹಾರುದ್ರಪ್ಪ ಸಂಪಗಾಂವಿ, ಮಲ್ಲಿಕಾರ್ಜುನ ಮೊರಬದ, ಮಲ್ಲಪ್ಪ (ಅಜ್ಜಪ್ಪ) ಕುಡಸೋಮಣ್ಣವರ, ವೀರಭದ್ರಯ್ಯ ಸಾಲಿಮಠ, ದುಂಡಪ್ಪ ತುರಮರಿ, ಲಕ್ಷ್ಮಣ ಸೋಮನಟ್ಟಿ, ಭುವನೇಶ್ವರಿ ಚಿಟ್ಟಿ, ಗಂಗವ್ವ ಬೆಟಗೇರಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-21-2130031380

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.