ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್‌ ಪಾವತಿ; ಬೆಂಗಳೂರು ಮುಂಚೂಣಿ

Last Updated 27 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವೆಗಳ ಖರೀದಿಗೆ ನಗದುರಹಿತ (ಡಿಜಿಟಲ್‌) ಪಾವತಿ ವಿಷಯದಲ್ಲಿ ಬೆಂಗಳೂರು ದೇಶದಲ್ಲಿಯೇ ಮುಂಚೂಣಿಯಲ್ಲಿದ್ದು, ಕರ್ನಾಟಕ ರಾಜ್ಯವು ಮಹಾರಾಷ್ಟ್ರ ನಂತರದ ಎರಡನೇ ಸ್ಥಾನದಲ್ಲಿ ಇದೆ.

ಕರ್ನಾಟಕವು ಸತತ 2ನೇ ವರ್ಷವೂ ಎರಡನೇ ಸ್ಥಾನ ಕಾಯ್ದುಕೊಂಡಿದೆ. ದಿನಸಿ, ರೆಸ್ಟೋರೆಂಟ್ಸ್‌, ಪೆಟ್ರೋಲ್‌ ಬಂಕ್‌, ಸಿದ್ಧ ಉಡುಪು ಮಳಿಗೆಗಳಲ್ಲಿ ಡಿಜಿಟಲ್‌ ಪಾವತಿಯ ಪ್ರಮಾಣ (ಶೇ 62) ಮತ್ತು ಮೌಲ್ಯ (ಶೇ 39) ಗರಿಷ್ಠ ಮಟ್ಟದಲ್ಲಿ ಇದೆ. ಒಟ್ಟಾರೆ ಡಿಜಿಟಲ್‌ ವಹಿವಾಟಿನಲ್ಲಿ ಚಿನ್ನಾಭರಣ ಮಳಿಗೆಗಳಲ್ಲಿನ ವಹಿವಾಟಿನ ಪಾಲು ಕೇವಲ ಶೇ 1ರಷ್ಟಿದೆ.

ಯುಪಿಐ ಜನಪ್ರಿಯತೆ: ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಯುಪಿಐ ಪಾವತಿ ವ್ಯವಸ್ಥೆಯು ಜನಪ್ರಿಯ ಪಾವತಿ ಮಾಧ್ಯಮವಾಗಿದೆ. ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳು ನಂತರದ ಸ್ಥಾನದಲ್ಲಿ ಇವೆ. 2018ಕ್ಕೆ ಹೋಲಿಸಿದರೆ 2019ರಲ್ಲಿ ‘ಯುಪಿಐ’ ಮೂಲಕ ₹ 18.36 ಲಕ್ಷ ಕೋಟಿ ಮೊತ್ತದ ವಹಿವಾಟು ನಡೆದು ಶೇ 214ರಷ್ಟು ಹೆಚ್ಚಳ ದಾಖಲಿಸಿದೆ.

ಡಿಜಿಟಲ್‌ ವಹಿವಾಟಿಗೆ ಸಂಬಂಧಿಸಿದಂತೆ ಜಾಗತಿಕ ಪಾವತಿ ಸಂಸ್ಥೆ ವರ್ಲ್ಡ್‌ಲೈನ್‌ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಮಾಹಿತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT