ಗುರುವಾರ , ಅಕ್ಟೋಬರ್ 24, 2019
21 °C

ಬ್ಯಾಂಕ್‌ ಆಫ್‌ ಬರೋಡಾ ಗೃಹ, ವಾಹನ ಸಾಲ ಅಗ್ಗ

Published:
Updated:

ಮುಂಬೈ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಬರೋಡಾ (ಬಿಒಬಿ) ರೆಪೊ ಆಧರಿಸಿದ ರಿಟೇಲ್‌ ಸಾಲಗಳ ಮೇಲಿನ ಬಡ್ಡಿದರವನ್ನು ಶೇ 0.25ರಷ್ಟು ಇಳಿಕೆ ಮಾಡಿದೆ. 

ಪರಿಷ್ಕೃತ ದರವು ಗೃಹ, ವಾಹನ, ಶಿಕ್ಷಣ, ವೈಯಕ್ತಿಕ ಮತ್ತು ಇತರೆ ಎಲ್ಲಾ ರೀತಿಯ ರಿಟೇಲ್‌ ಸಾಲಗಳಿಗೆ ಅನ್ವಯವಾಗಲಿದೆ. ಗೃಹ ಮತ್ತು ವಾಹನ ಸಾಲಗಳು ಶೇ 8.10 ರಿಂದ ಶೇ 8.60ರ ಬಡ್ಡಿದರದಲ್ಲಿ ಲಭ್ಯವಿವೆ ಎಂದು ಬ್ಯಾಂಕ್‌ ತಿಳಿಸಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಕಳೆದ ವಾರ ರೆಪೊ ದರವನ್ನು ಶೇ 0.25ರಷ್ಟು ಕಡಿಮೆ ಮಾಡಿದ್ದು ಬ್ಯಾಂಕ್‌ಗಳಿಗೆ ನೀಡಿಕೆ ದರವು ಶೇ 5.15ಕ್ಕೆ ತಲುಪಿದೆ.

ರೆಪೊ ದರಕ್ಕೆ ಅನುಗುಣವಾಗಿ ಬ್ಯಾಂಕ್‌ಗಳು ಬಡ್ಡಿದರ ಕಡಿತ ಮಾಡಬೇಕಾಗಿರುವುದರಿಂದ ಬಡ್ಡಿದರ ಇಳಿಕೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)