₹ 5,000 ಕೋಟಿ ದಂಡ ವಸೂಲಿ

7
ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ

₹ 5,000 ಕೋಟಿ ದಂಡ ವಸೂಲಿ

Published:
Updated:
Deccan Herald

ನವದೆಹಲಿ: ಬ್ಯಾಂಕ್‌ ಖಾತೆಯಲ್ಲಿ ನಿಗದಿಪಡಿಸಿದ ಕನಿಷ್ಠ ಮೊತ್ತ ಕಾಯ್ದುಕೊಳ್ಳದ ಗ್ರಾಹಕರಿಂದ ಬ್ಯಾಂಕ್‌ಗಳು ಒಂದು ವರ್ಷಾವಧಿಯಲ್ಲಿ ₹ 5 ಸಾವಿರ ಕೋಟಿ ದಂಡ ವಸೂಲಿ ಮಾಡಿವೆ.

ಸರ್ಕಾರಿ ಸ್ವಾಮ್ಯದ 21 ಮತ್ತು ಖಾಸಗಿ ವಲಯದ ಮೂರು ಬ್ಯಾಂಕ್‌ಗಳು 2017–18ರ ಅವಧಿಯಲ್ಲಿ ಈ ಮೊತ್ತದ ದಂಡ ಸಂಗ್ರಹಿಸಿವೆ. ಈ ವಿಷಯದಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮುಂಚೂಣಿಯಲ್ಲಿ ಇದೆ. ಹಿಂದಿನ ವರ್ಷ ಈ ಬ್ಯಾಂಕ್‌ನ ಒಟ್ಟಾರೆ ನಷ್ಟವೇ ₹ 6,547 ಕೋಟಿಗಳಷ್ಟಿತ್ತು.

ಉಳಿತಾಯ ಖಾತೆಯಲ್ಲಿ ತಿಂಗಳ ಸರಾಸರಿ ಕನಿಷ್ಠ ಮೊತ್ತಕ್ಕಿಂತ ಕಡಿಮೆ ಹಣ ಇರುವುದಕ್ಕೆ ದಂಡ ವಿಧಿಸುವುದನ್ನು ಎಸ್‌ಬಿಐ 2017ರ ಏಪ್ರಿಲ್‌ನಿಂದ ಪುನಃ ಜಾರಿಗೆ ತಂದಿತ್ತು. 2012 ರಿಂದ ಈ ಪದ್ಧತಿ ಜಾರಿಯಲ್ಲಿ ಇದ್ದಿರಲಿಲ್ಲ. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಅಕ್ಟೋಬರ್‌ನಿಂದ ಈ ದಂಡದ ಮೊತ್ತವನ್ನು ಎಸ್‌ಬಿಐ ಕಡಿಮೆ ಮಾಡಿತ್ತು. ಆರ್‌ಬಿಐ ನಿಯಮಗಳ ಅನುಸಾರ, ಬ್ಯಾಂಕ್‌ಗಳು ತಮ್ಮ ಗ್ರಾಹಕರ ಮೇಲೆ ಸೇವಾ ಶುಲ್ಕ ವಿಧಿಸಬಹುದಾಗಿದೆ.

24 ಬ್ಯಾಂಕ್‌ಗಳು ಸಂಗ್ರಹಿಸಿದ ಒಟ್ಟಾರೆ ದಂಡದ ಮೊತ್ತ ₹ 4,989.55 ಕೋಟಿ ಆಗಿದೆ. ಇದರ ಅರ್ಧದಷ್ಟು ಮೊತ್ತ (₹ 2,434 ಕೋಟಿ) ಎಸ್‌ಬಿಐ ಪಾಲಾಗಿದೆ. ನಂತರದ ಸ್ಥಾನದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌, ಆ್ಯಕ್ಸಿಸ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಇವೆ.

ಸೇವಾ ಶುಲ್ಕಗಳಿಂದ ಮುಕ್ತವಾದ, ಬಡವರಲ್ಲಿ ಉಳಿತಾಯ ‍ಪ್ರವೃತ್ತಿ ಉತ್ತೇಜಿಸುವ ಬೇಸಿಕ್‌ ಸೇವಿಂಗ್ಸ್‌ ಬ್ಯಾಂಕ್‌ ಡಿಪಾಸಿಟ್‌ (ಬಿಎಸ್‌ಬಿಡಿ) ಮತ್ತು ಪ್ರಧಾನ ಮಂತ್ರಿ ಜನ ಧನ್‌ ಯೋಜನೆಗೆ ಈ ನಿರ್ಬಂಧವು ಅನ್ವಯಿಸುವುದಿಲ್ಲ.

 ಬ್ಯಾಂಕ್‌;                 ವಸೂಲಿ ಮಾಡಿದ ದಂಡ (₹ ಕೋಟಿಗಳಲ್ಲಿ)

ಎಸ್‌ಬಿಐ;                          2,434

ಎಚ್‌ಡಿಎಫ್‌ಸಿ ಬ್ಯಾಂಕ್‌;            591

ಆ್ಯಕ್ಸಿಸ್‌ ಬ್ಯಾಂಕ್‌;                  530

ಐಸಿಐಸಿಐ ಬ್ಯಾಂಕ್‌;                317

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !