ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ ಸೌಕರ್ಯ ವಲಯಕ್ಕೆ ಸಾಲ ಶೇ 18.5ರಷ್ಟು ಹೆಚ್ಚಳ

ಭಾರತೀಯ ರಿಸರ್ವ್‌ ಬ್ಯಾಂಕ್‌ನ ವರದಿಯಲ್ಲಿ ಉಲ್ಲೇಖ
Last Updated 21 ಮೇ 2019, 19:42 IST
ಅಕ್ಷರ ಗಾತ್ರ

ಮುಂಬೈ: 2018–19ನೆ ಹಣಕಾಸು ವರ್ಷದಲ್ಲಿ ಮೂಲ ಸೌಕರ್ಯ ವಲಯಕ್ಕೆ ಬ್ಯಾಂಕ್‌ ಸಾಲದ ಪ್ರಮಾಣವು ಶೇ 18.5ರಷ್ಟು ಹೆಚ್ಚಳಗೊಂಡಿದೆ.

ಕಳೆದ ವರ್ಷ ₹ 10.55 ಲಕ್ಷ ಕೋಟಿಗಳಷ್ಟು ಸಾಲ ವಿತರಿಸಲಾಗಿದೆ. ಇದು 2012–13ನೆ ಹಣಕಾಸು ವರ್ಷದಿಂದೀಚೆಗಿನ ಗರಿಷ್ಠ ಮಟ್ಟದ ಸಾಲ ನೀಡಿಕೆಯಾಗಿದೆ. ಆ ವರ್ಷ ಸಾಲದ ಪ್ರಮಾಣವು ಶೇ 15.83ರಷ್ಟಿತ್ತು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಅಂಕಿ ಅಂಶಗಳು ತಿಳಿಸಿವೆ.

2017 ಮತ್ತು 2018ನೆ ಹಣಕಾಸು ವರ್ಷದಲ್ಲಿ ಸಾಲ ನೀಡಿಕೆಯ ಬೆಳವಣಿಗೆ ಪ್ರಮಾಣವು ಕ್ರಮವಾಗಿ ಶೇ 1.7 ಮತ್ತು ಶೇ 6.1ರಷ್ಟು ಕಡಿಮೆಯಾಗಿತ್ತು.

‘ಈ ವಲಯದ ಹಲವಾರು ಕಂಪನಿಗಳು ಸಾಲ ಮರುಪಾವತಿ ಮಾಡಿಲ್ಲ ಎನ್ನುವ ಕಾರಣಕ್ಕೆ ಸಾಲ ಮಂಜೂರಾತಿಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಅನೇಕ ಕಂಪನಿಗಳು ಉತ್ತಮ ಸಾಧನೆ ಮಾಡುತ್ತಿವೆ’ ಎಂದು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ವೊಂದರ ಮುಖ್ಯಸ್ಥರು ಹೇಳಿದ್ದಾರೆ.

ವಸೂಲಾಗದ ಸಾಲದ ಪ್ರಮಾಣವು ಗರಿಷ್ಠ ಪ್ರಮಾಣದಲ್ಲಿ ಇರುವ ಕಾರಣಕ್ಕೆ ಬ್ಯಾಂಕ್‌ಗಳು ಮೂಲ ಸೌಕರ್ಯ ವಲಯಕ್ಕೆ ಸಾಲ ನೀಡುವುದಕ್ಕೆ ಕಡಿವಾಣ ಹಾಕಿದ್ದವು.

‘ಭಾರತೀಯ ರಿಸರ್ವ್‌ ಬ್ಯಾಂಕ್‌, ಬ್ಯಾಂಕ್‌ಗಳ ಹಣಕಾಸು ಪರಿಸ್ಥಿತಿಯನ್ನು ಪರಾಮರ್ಶಿಸಿದ ನಂತರ ಮೂಲ ಸೌಕರ್ಯ ವಲಯದ ‘ಎನ್‌ಪಿಎ’ ಪ್ರಮಾಣವನ್ನು ಗುರುತಿಸಲಾಗಿದೆ. ಬ್ಯಾಂಕ್‌ಗಳು ಈಗ ಈ ವಲಯಕ್ಕೆ ಸಾಲ ನೀಡಲು ಮುಂದಾಗಿವೆ. ಈ ವಲಯದ ಕಂಪನಿಗಳಿಂದ ಸಾಲಕ್ಕೆ ಬೇಡಿಕೆಯೂ ಹೆಚ್ಚುತ್ತಿದೆ’ ಎಂದು ಕೇರ್‌ ರೇಟಿಂಗ್ಸ್‌ನ ಮುಖ್ಯ ಆರ್ಥಿಕತಜ್ಞ ಮದನ್‌ ಸಬ್ನವಿಸ್‌ ಹೇಳಿದ್ದಾರೆ.

ಈ ವಲಯಕ್ಕೆ ಸಾಲ ನೀಡಿಕೆ ಪ್ರಮಾಣವು ಏರಿಕೆಯಾಗಿದ್ದರೂ, ಮೂಲ ಸೌಕರ್ಯ ವಲಯದ ಕಂಪನಿಗಳು, ತಮ್ಮ ಮರುಪಾವತಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಾಲ ಪಡೆಯುವುದಕ್ಕೆ ಬ್ಯಾಂಕ್‌ಗಳು ಅವಕಾಶ ನೀಡುತ್ತಿಲ್ಲ.

ಒಟ್ಟಾರೆ ಕೈಗಾರಿಕಾ ವಲಯದ ಬ್ಯಾಂಕ್‌ ಸಾಲ ನೀಡಿಕೆ ಪ್ರಮಾಣವು 2019–19ರಲ್ಲಿ ಶೇ 6.9ರಷ್ಟು ಹೆಚ್ಚಳಗೊಂಡು ₹ 28.58 ಲಕ್ಷ ಕೋಟಿಗೆ ತಲುಪಿದೆ. 2018ರಲ್ಲಿ ಇದು ಕೇವಲ ಶೇ 0.7ರಷ್ಟು ಏರಿಕೆ ಕಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT