ಮಂಗಳವಾರ, ಸೆಪ್ಟೆಂಬರ್ 24, 2019
29 °C

ಬ್ಯಾಂಕ್‌ ಆಫ್‌ ಇಂಡಿಯಾ ಹಬ್ಬದ ಕೊಡುಗೆ: ಗೃಹ ಸಾಲಕ್ಕೆ ಸಂಸ್ಕರಣಾ ಶುಲ್ಕ ಇಲ್ಲ

Published:
Updated:

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಇಂಡಿಯಾ (ಬಿಒಐ) ಗ್ರಾಹಕರಿಗೆ ಹಬ್ಬದ ಕೊಡುಗೆ ಘೋಷಿಸಿದೆ. ಸಂಸ್ಕರಣಾ ಶುಲ್ಕ (processing charge) ಇಲ್ಲದೇ ರಿಯಾಯ್ತಿ ದರದಲ್ಲಿ ಗೃಹ ಸಾಲ ಸೌಲಭ್ಯ ನೀಡಲಿದೆ. 

‘₹ 30 ಲಕ್ಷದವರೆಗಿನ ಗೃಹ ಸಾಲವು ₹ 8.35ರ ಬಡ್ಡಿದರದಲ್ಲಿ ಹಾಗೂ ₹ 30 ಲಕ್ಷಕ್ಕಿಂತ ಅಧಿಕ ಮೊತ್ತದ ಸಾಲವು ರೆಪೊ ದರಕ್ಕೆ ಸಂಪರ್ಕಿಸಲಾಗಿದೆ’ ಎಂದು ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಸಲೀಲ್‌ ಕುಮಾರ್‌ ಸ್ವೈನ್‌ ತಿಳಿಸಿದ್ದಾರೆ.

ಸ್ಪರ್ಧಾತ್ಮ ದರದಲ್ಲಿ ಶಿಕ್ಷಣ ಸಾಲ ನೀಡುವುದಾಗಿಯೂ ಅವರು ಹೇಳಿದ್ದಾರೆ.

ಎಸ್‌ಎಂಇ ವೆಲ್‌ಕಂ ಆಫರ್‌ನಲ್ಲಿ ₹ 50 ಲಕ್ಷದಿಂದ ₹ 5 ಕೋಟಿಯವರೆಗಿನ ಮೊತ್ತದ ಸಾಲಕ್ಕೆ ಭದ್ರತಾ ಮೌಲ್ಯದ ಆಧಾರದ ಮೇಲೆ ರಿಯಾಯ್ತಿ ದರದಲ್ಲಿ ಸಾಲ ಸಿಗಲಿದೆ.

ಹಿಂದಿನ ತಿಂಗಳಿನಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಕಡಿಮೆ ಬಡ್ಡಿದರಕ್ಕೆ ಗೃಹ ಮತ್ತು ವಾಹನ ಸಾಲದ ಕೊಡುಗೆ ಘೋಷಿಸಿತ್ತು.

Post Comments (+)