ನವದೆಹಲಿ: ಕಳೆದ 11 ಆರ್ಥಿಕ ವರ್ಷಗಳಲ್ಲಿ ದೇಶದಲ್ಲಿನ ಬ್ಯಾಂಕ್ಗಳು ಒಟ್ಟು ₹9.75 ಲಕ್ಷ ಕೋಟಿ ಮೊತ್ತದ ಸಾಲವನ್ನು ರೈಟ್ಆಫ್ ಮಾಡಿವೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಸೋಮವಾರ ತಿಳಿಸಿದೆ.

2019–20ರ ಆರ್ಥಿಕ ವರ್ಷದಲ್ಲಿ ರೈಟ್ಆಫ್ ಮಾಡಲಾದ ಮೊತ್ತವು ₹1.59 ಲಕ್ಷ ಕೋಟಿಯಷ್ಟಾಗಿತ್ತು. ಇದು 2024–25ರ ವೇಳೆಗೆ ₹47,568 ಕೋಟಿಗೆ ಇಳಿದಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ರಾಜ್ಯ ಖಾತೆ ಸಚಿವ ಪಂಕಜ್ ಚೌಧರಿ ಅವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

2014–15ರಲ್ಲಿ ₹31,723 ಕೋಟಿ, 2015–16ರಲ್ಲಿ ₹40,416 ಕೋಟಿ, 2016–17ರಲ್ಲಿ ₹68,308 ಕೋಟಿ, 2017–18ರಲ್ಲಿ ₹99,132 ಕೋಟಿ ಮತ್ತು 2018–19ರಲ್ಲಿ ₹1 ಲಕ್ಷ ಕೋಟಿ ರೈಟ್ಆಫ್ ಆಗಿದೆ ಎಂದು ಹೇಳಿದ್ದಾರೆ.

ರೈಟ್ಆಫ್ ಎಂದರೆ ಸಾಲ ಮನ್ನಾ ಅಲ್ಲ. ರೈಟ್ಆಫ್ ಆದ ಸಾಲಗಳ ವಸೂಲಿಯು ನಿರಂತರ ಪ್ರಕ್ರಿಯೆಯಾಗಿದೆ. ಬ್ಯಾಂಕ್ಗಳು ತಮಗೆ ಲಭ್ಯವಿರುವ ವಿವಿಧ ಮಾರ್ಗಗಳ ಮೂಲಕ ವಸೂಲಾತಿ ಪ್ರಕ್ರಿಯೆಯನ್ನು ಮುಂದುವರಿಸುತ್ತವೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.