ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಬಿಐ ಅಧ್ಯಕ್ಷ ಹುದ್ದೆಗೆ ದಿನೇಶ್‌ ಕುಮಾರ್ ಖರಾ ಹೆಸರು ಶಿಫಾರಸು

Last Updated 29 ಆಗಸ್ಟ್ 2020, 4:27 IST
ಅಕ್ಷರ ಗಾತ್ರ

ನವದೆಹಲಿ: ಎಸ್‌ಬಿಐಯ ಮುಂದಿನ ಅಧ್ಯಕ್ಷರಾಗಿ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ದಿನೇಶ್‌ ಕುಮಾರ್ ಖರಾ ಹೆಸರನ್ನು ‘ಬ್ಯಾಂಕ್ಸ್‌ ಬೋರ್ಡ್‌ ಬ್ಯೂರೊ (ಬಿಬಿಬಿ)’ ಶಿಫಾರಸು ಮಾಡಿದೆ.

ಹಾಲಿ ಅಧ್ಯಕ್ಷ ರಜನೀಶ್ ಕುಮಾರ್ ಅವರ ಮೂರು ವರ್ಷದ ಅವಧಿ ಅಕ್ಟೋಬರ್ 7ರಂದು ಕೊನೆಗೊಳ್ಳಲಿದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ಅಧ್ಯಕ್ಷ ಹುದ್ದೆಗೆ ನೇಮಕಾತಿ ನಡೆಸುವ ‘ಬಿಬಿಬಿ’ ಸದಸ್ಯರು ಶುಕ್ರವಾರ ಎಸ್‌ಬಿಐನ ನಾಲ್ವರು ವ್ಯವಸ್ಥಾಪಕ ನಿರ್ದೇಶಕರ ಸಂದರ್ಶನ ನಡೆಸಿದ್ದು, ಬಳಿಕ ಶಿಫಾರಸು ಮಾಡಿದ್ದಾರೆ.

‘ಕಾರ್ಯಕ್ಷಮತೆ ಮತ್ತು ಒಟ್ಟಾರೆ ಅನುಭವವನ್ನು ಗಣನೆಗೆ ತೆಗೆದುಕೊಂಡು ದಿನೇಶ್‌ ಕುಮಾರ್ ಖರಾ ಅವರನ್ನು ಖಾಲಿಯಾಗುತ್ತಿರುವ ಹುದ್ದೆಗೆ ಶಿಫಾರಸು ಮಾಡಲಾಗುತ್ತಿದೆ’ ಎಂದು ‘ಬಿಬಿಬಿ’ ಪ್ರಕಟಣೆ ತಿಳಿಸಿದೆ.

‘ಬಿಬಿಬಿ’ ಶಿಫಾರಸನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುತ್ತದೆ. ಕೇಂದ್ರ ಸಚಿವಸಂಪುಟದ ನೇಮಕಾತಿ ಸಮಿತಿಯು ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT