ಶನಿವಾರ, ಆಗಸ್ಟ್ 24, 2019
27 °C

ಬ್ಯಾಂಕ್‌ಗಳಿಂದ ಬಡ್ಡಿದರ ಕಡಿತ ಅರಂಭ

Published:
Updated:

ಮುಂಬೈ (ಪಿಟಿಐ): ಆರ್‌ಬಿಐ ರೆಪೊ ದರದಲ್ಲಿ ಕಡಿತ ಮಾಡಿರುವುದರಿಂದ ಅದಕ್ಕೆ ಅನುಗುಣವಾಗಿ ವಿವಿಧ ಬ್ಯಾಂಕ್‌ಗಳು ಸಹ ಬಡ್ಡಿದರದಲ್ಲಿ ಇಳಿಕೆ ಮಾಡಲಾರಂಭಿಸಿವೆ.

ಅಲಹಾಬಾದ್ ಬ್ಯಾಂಕ್‌ ಆಗಸ್ಟ್‌ 14ರಿಂದ ಜಾರಿಗೆ ಬರುವಂತೆ ವಿವಿಧ ಅವಧಿಗಳ ಎಂಸಿಎಲ್‌ಆರ್‌ ಅನ್ನು ಶೇ 0.15 ರಿಂದ ಶೇ 0.20ರವರೆಗೂ ತಗ್ಗಿಸಿದೆ. ಯೂಕೊ ಬ್ಯಾಂಕ್‌ ಶೇ0.15 ರಷ್ಟು ಇಳಿಕೆ ಮಾಡಿದೆ.

ಬ್ಯಾಂಕ್‌ ಆಫ್‌ ಇಂಡಿಯಾ ಒಂದು ವರ್ಷದ ಸಾಲದ ಬಡ್ಡಿದರವನ್ನು ಶೇ 8.60 ರಿಂದ ಶೇ 8.35ಕ್ಕೆ ಇಳಿಕೆ ಮಾಡಿದೆ. ಆಂಧ್ರ ಬ್ಯಾಂಕ್‌ ಸಹ ಶೇ 0.25ರಷ್ಟು ಕಡಿಮೆ ಮಾಡಿದ್ದು ಒಂದು ವರ್ಷದ ದರ ಶೇ 8.45ಕ್ಕೆ ಇಳಿಕೆಯಾಗಿದೆ. ಇನ್ನೂ ಕೆಲವು ಬ್ಯಾಂಕ್‌ಗಳು ಬಡ್ಡಿದರ ತಗ್ಗಿಸಲಿವೆ ಎಂದು ಮೂಲಗಳು ತಿಳಿಸಿವೆ.

Post Comments (+)