ನವದೆಹಲಿ: ಗ್ರಾಹಕರ ದತ್ತಾಂಶವನ್ನು ರಕ್ಷಿಸಲು, ಹಣಕಾಸಿನ ಸಂಪನ್ಮೂಲವನ್ನು ಕಾಪಾಡಿಕೊಳ್ಳಲು ಐ.ಟಿ. ಸೇವೆಗಳ ಮೇಲಿನ ವೆಚ್ಚವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲು ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ಮುಂದಾಗಿವೆ.

ಆ್ಯಂಥ್ರೋಪಿಕ್ ಕಂಪನಿಯ ಮೈಥೋಸ್ ಎ.ಐ. ಪರಿಕರವು ಹಣಕಾಸಿನ ದತ್ತಾಂಶದ ಭದ್ರತೆಗೆ ಸವಾಲಾಗಬಹುದು ಎಂಬ ಭೀತಿ ವ್ಯಕ್ತವಾಗಿದೆ. ಬ್ಯಾಂಕಿಂಗ್ ಸಂಸ್ಥೆಗಳ ಸೈಬರ್ ಭದ್ರತಾ ವ್ಯವಸ್ಥೆಯಲ್ಲಿನ ದೌರ್ಬಲ್ಯಗಳನ್ನು ಗುರುತಿಸುವ ಸಾಮರ್ಥ್ಯವು ಈ ಪರಿಕರಕ್ಕೆ ಇದೆ, ಅದನ್ನು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅಡ್ಡಿ ಸೃಷ್ಟಿಸುವ ಕೆಲಸಕ್ಕೆ ಬಳಸಬಹುದು ಎಂಬ ಆತಂಕ ಇದೆ. ಇದು ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ಐ.ಟಿ ಸೇವೆಗಳ ಮೇಲಿನ ವೆಚ್ಚ ಹೆಚ್ಚು ಮಾಡುವ ತೀರ್ಮಾನಕ್ಕೆ ಬರಲು ಕಾರಣವಾಗಿದೆ.

ಹೊಸ ಸವಾಲಿನ ಕಾರಣದಿಂದಾಗಿ ಬ್ಯಾಂಕ್ಗಳು ತಾವು ಸೈಬರ್ ದಾಳಿಗೆ ತುತ್ತಾಗಬಹುದಾದ ಅಪಾಯವನ್ನು ಕಡಿಮೆ ಮಾಡಿಕೊಳ್ಳಲು ಐ.ಟಿ ಸೇವೆಗಳ ಮೇಲಿನ ಹೂಡಿಕೆಯನ್ನು ಹೆಚ್ಚು ಮಾಡಬೇಕಾಗುತ್ತದೆ ಎಂದು ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್ನ ಎಂ.ಡಿ ಹಾಗೂ ಸಿಇಒ ಸ್ವರೂಪ್ ಕುಮಾರ್ ಸಹಾ ಹೇಳಿದ್ದಾರೆ.

ಹೊಸ ತಂತ್ರಜ್ಞಾನವು ಒಡ್ಡಿರುವ ಸವಾಲನ್ನು ಎದುರಿಸುವ ಉದ್ದೇಶದಿಂದ ತಮ್ಮ ಬ್ಯಾಂಕ್ ಐ.ಟಿ ವೆಚ್ಚಗಳನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಜಾಸ್ತಿ ಮಾಡಲಿದೆ ಎಂದು ಸಹಾ ತಿಳಿಸಿದ್ದಾರೆ.

ಬ್ಯಾಂಕ್ಗಳ ಕಂಪ್ಯೂಟರ್ ವ್ಯವಸ್ಥೆಯಲ್ಲಿನ ದೌರ್ಬಲ್ಯವನ್ನು ಗುರುತಿಸಿ, ಅವುಗಳ ಮೇಲೆ ಸೈಬರ್ ದಾಳಿ ನಡೆಸುವ ಸಾಮರ್ಥ್ಯವನ್ನು ಮೈಥೋಸ್ ಪ್ರದರ್ಶಿಸಿದ ನಂತರದಲ್ಲಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುನ್ನೆಚ್ಚರಿಕೆ ಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಬ್ಯಾಂಕ್ಗಳಿಗೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಬ್ಯಾಂಕ್ಗಳ ಮುಖ್ಯಸ್ಥರ ಮಾತುಗಳು ಮಹತ್ವ ಪಡೆಯುತ್ತವೆ.

ಇಂತಹ ಸವಾಲುಗಳನ್ನು ಎದುರಿಸಲು ಕೇಂದ್ರ ಸರ್ಕಾರವು ಎಸ್ಬಿಐ ಅಧ್ಯಕ್ಷ ಸಿ.ಎಸ್. ಸೆಟ್ಟಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ. ಮೈಥೋಸ್ನಿಂದಾಗಿ ಎದುರಾಗಬಹುದಾದ ಸವಾಲುಗಳನ್ನು ಗುರುತಿಸಿ, ಅವುಗಳಿಗೆ ಪರಿಹಾರ ತಿಳಿಸುವ ಹೊಣೆಯನ್ನು ಈ ಸಮಿತಿಗೆ ವಹಿಸಲಾಗಿದೆ.

ಮೈಥೋಸ್ ಪರಿಕರವು ವಿವಿಧೆಡೆ ನೀತಿ ನಿರೂಪಕರ ಪಾಲಿಗೆ ಎಚ್ಚರಿಕೆಯ ಕರೆಗಂಟೆಯಾಗಿ ಕಂಡಿದೆ. ಈ ಪರಿಕರವು ಬ್ಯಾಂಕಿಂಗ್ ವ್ಯವಸ್ಥೆಗೆ ಹಾಗೂ ಅದು ಬಳಕೆ ಮಾಡುತ್ತಿರುವ ಹಳೆಯ ತಂತ್ರಜ್ಞಾನ ವ್ಯವಸ್ಥೆಗೆ ಸವಾಲು ಎಂದು ತಜ್ಞರು ಭಾವಿಸಿದ್ದಾರೆ.

ಆ್ಯಂಥ್ರೋಪಿಕ್ ಕಂಪನಿಯ ಕ್ಲಾಡ್ ಮೈಥೋಸ್ ಪರಿಕರವನ್ನು ಪ್ರಾಯೋಗಿಕ ಬಳಕೆಗಾಗಿ ಏಪ್ರಿಲ್ 7ರಂದು ಬಿಡುಗಡೆ ಮಾಡಲಾಗಿದೆ. ಈ ಪರಿಕರವು ಮನುಷ್ಯರಿಗಿಂತ ಹೆಚ್ಚಿನ ಸಾಮರ್ಥ್ಯದ ಹ್ಯಾಕಿಂಗ್ ಪರಿಣತಿ ಹೊಂದಿದೆ ಎಂಬುದು ಪರೀಕ್ಷೆಗಳ ಸಂದರ್ಭದಲ್ಲಿ ಗೊತ್ತಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-51-239542262

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.