ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ಗಳ ಬಡ್ಡಿ ವರಮಾನ ಹೆಚ್ಚಳ

2022ರ ಡಿಸೆಂಬರ್‌ ತ್ರೈಮಾಸಿಕ ಅವಧಿ
Last Updated 19 ಫೆಬ್ರುವರಿ 2023, 21:45 IST
ಅಕ್ಷರ ಗಾತ್ರ

ಮುಂಬೈ (: ಬ್ಯಾಂಕ್‌ಗಳ ನಿವ್ವಳ ಬಡ್ಡಿ ವರಮಾನವು (ಎನ್‌ಐಐ) 2022ರ ಡಿಸೆಂಬರ್‌ ತ್ರೈಮಾಸಿಕದಲ್ಲಿ ಶೇ 25.5ರಷ್ಟು ದಾಖಲೆಯ ಹೆಚ್ಚಳ ಕಂಡಿದ್ದು ₹ 1.78 ಲಕ್ಷ ಕೋಟಿಗೆ ತಲುಪಿದೆ ಎಂದು ಕೇರ್ ರೇಟಿಂಗ್ಸ್‌ ಸಂಸ್ಥೆ ಹೇಳಿದೆ.

ನಿವ್ವಳ ಬಡ್ಡಿ ಲಾಭವು (ಎನ್‌ಐಎಂ) ಶೇ 0.17ರಷ್ಟು ಹೆಚ್ಚಾಗಿ ಶೇ 3.28ಕ್ಕೆ ತಲುಪಿದೆ. ಇದರಿಂದಾಗಿ ಬ್ಯಾಂಕ್‌ಗಳಿಗೆ ಮುಂಗಡದಿಂದ ಹೆಚ್ಚಿನ ಗಳಿಕೆ ಬಂದಿದೆ. ಬ್ಯಾಂಕ್‌ಗಳು ಹಾಲಿ ಇರುವ ಸಾಲಗಳ ಮೇಲಿನ ಬಡ್ಡಿದರವನ್ನು ತ್ವರಿತ ಪ್ರಮಾಣದಲ್ಲಿ ಹೆಚ್ಚಳ ಮಾಡುವ ಜೊತೆಗೆ ಹೊಸ ಸಾಲಗಳ ಬಡ್ಡಿದರವನ್ನೂ ಏರಿಕೆ ಮಾಡಿವೆ. ಆದರೆ, ಠೇವಣಿಗಳ ಮೇಲಿನ ಬಡ್ಡಿದರದಲ್ಲಿ ಹೆಚ್ಚಿನ ಬದಲಾವಣೆ ಮಾಡಿಲ್ಲ. ಹೀಗಾಗಿ ಡಿಸೆಂಬರ್‌ ತ್ರೈಮಾಸಿಕದಲ್ಲಿ ಎನ್‌ಐಎಂ ಹೆಚ್ಚಾಗಿದೆ ಎಂದು ಕೇರ್ ರೇಟಿಂಗ್ಸ್‌ನ ಹಿರಿಯ ನಿರ್ದೇಶಕ ಸಂಜಯ್‌ ಅಗರ್ವಾಲ್‌ ತಿಳಿಸಿದ್ದಾರೆ.

ಖಾಸಗಿ ವಲಯದ ಬ್ಯಾಂಕ್‌ಗಳ ಕಾರ್ಯಾಚರಣೆ ಸಾಮರ್ಥ್ಯ ಉತ್ತಮ ಆಗಿರುವುದರಿಂದ ಬ್ಯಾಂಕಿಂಗ್‌ ವಲಯದ ಒಟ್ಟು ಎನ್‌ಐಎಂನಲ್ಲಿ ಅವುಗಳ ಪಾಲು ಹೆಚ್ಚಿನದ್ದಾಗಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಖಾಸಗಿ ವಲಯದ ಬ್ಯಾಂಕ್‌ಗಳ ಎನ್‌ಐಎಂ ಶೇ 0.15ರಷ್ಟು ಹೆಚ್ಚಾಗಿ ಶೇ 4.03ಕ್ಕೆ ತಲುಪಿದೆ. ಇದೇ ಅವಧಿಯಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಎನ್‌ಐಎಂ ಶೇ 0.17ರಷ್ಟು ಹೆಚ್ಚಾಗಿ ಶೇ 2.85ಕ್ಕೆ ಏರಿಕೆ ಆಗಿದೆ ಎಂದು ಅವರು ಹೇಳಿದ್ದಾರೆ.

ನಿವ್ವಳ ಬಡ್ಡಿ ವರಮಾನ ಅಥವಾ ಎನ್‌ಐಐ ಬ್ಯಾಂಕ್‌ಗಳ ವರಮಾನದ ಪ್ರಮುಖ ಮೂಲವಾಗಿದೆ. ಮುಂಗಡಗಳ ಮೇಲೆ ಗಳಿಸಿರುವ ಬಡ್ಡಿ ಮತ್ತು ಠೇವಣಿದಾರರು ಅಥವಾ ನಿಧಿಗಳಿಗೆ ಪಾವತಿಸುವ ಬಡ್ಡಿಯ ನಡುವಿನ ವ್ಯತ್ಯಾಸವೇ ಎನ್‌ಐಐ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT