ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಗ್ಗಿದ ಎನ್‌ಪಿಎ ಮೊತ್ತ: ಅನುರಾಗ್ ಠಾಕೂರ್

Last Updated 2 ಫೆಬ್ರುವರಿ 2021, 14:41 IST
ಅಕ್ಷರ ಗಾತ್ರ

ನವದೆಹಲಿ: ಬ್ಯಾಂಕಿಂಗ್‌ ವಲಯದ ವಸೂಲಾಗದ ಸಾಲದ ಮೊತ್ತವು, 2018ರ ಮಾರ್ಚ್‌ನಲ್ಲಿ ₹ 10.36 ಲಕ್ಷ ಕೋಟಿ ಇದ್ದಿದ್ದು, 2020ರ ಸೆಪ್ಟೆಂಬರ್‌ ಅಂತ್ಯಕ್ಕೆ ₹ 8.08 ಲಕ್ಷ ಕೋಟಿಗೆ ತಗ್ಗಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ರಾಜ್ಯಸಭೆಗೆ ತಿಳಿಸಿದ್ದಾರೆ.

ವಾಣಿಜ್ಯ ಬ್ಯಾಂಕ್‌ಗಳ ಒಟ್ಟು ಎನ್‌ಪಿಎ ಮೊತ್ತವು 2015ರ ಮಾರ್ಚ್‌ 31ಕ್ಕೆ ₹ 3.23 ಲಕ್ಷ ಕೋಟಿ ಇತ್ತು. ಸರಿಯಾಗಿ ಮರುಪಾವತಿ ಆಗುತ್ತಿಲ್ಲದಿದ್ದ ಸಾಲಗಳನ್ನು ಅನುತ್ಪಾದಕ ಸಾಲ ಎಂದು ಗುರುತಿಸಿದ ಪರಿಣಾಮವಾಗಿ ಎನ್‌ಪಿಎ ಮೊತ್ತವು, 2018ರ ಮಾರ್ಚ್‌ 31ಕ್ಕೆ ₹ 10.36 ಲಕ್ಷ ಕೋಟಿಗೆ ಹೆಚ್ಚಿತ್ತು ಎಂದು ಠಾಕೂರ್ ಹೇಳಿದ್ದಾರೆ.

ಎನ್‌ಪಿಎ ಗುರುತಿಸುವಿಕೆ, ಅವುಗಳಿಗೆ ಸಂಬಂಧಿಸಿದ ಪ್ರಕರಣ ಇತ್ಯರ್ಥಪಡಿಸುವುದು, ಬ್ಯಾಂಕ್‌ಗಳಿಗೆ ಮತ್ತೆ ಹಣಕಾಸಿನ ನೆರವು ನೀಡುವುದು ಹಾಗೂ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಸರ್ಕಾರದ ಕಾರ್ಯತಂತ್ರದ ಪರಿಣಾಮವಾಗಿ ಎನ್‌ಪಿಎ ಮೊತ್ತದಲ್ಲಿ ₹ 2.27 ಲಕ್ಷ ಕೋಟಿ ಕಡಿಮೆ ಆಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT