ಬುಧವಾರ, ಅಕ್ಟೋಬರ್ 16, 2019
22 °C

ಬಾಟಾದಿಂದ ವಿಸ್ತರಣಾ ಕಾರ್ಯಕ್ರಮ

Published:
Updated:
Prajavani

ಬೆಂಗಳೂರು: ದೇಶದ ಅತಿದೊಡ್ಡ ಪಾದರಕ್ಷೆ ಬ್ರ್ಯಾಂಡ್‌ ಆಗಿರುವ ಬಾಟಾ ಇಂಡಿಯಾ ಲಿಮಿಟೆಡ್‌, ತನ್ನ ವಹಿವಾಟನ್ನು ಮುಂದಿನ 2 ವರ್ಷಗಳಲ್ಲಿ ದೇಶದಾದ್ಯಂತ 180 ಪಟ್ಟಣಗಳಿಗೆ ವಿಸ್ತರಿಸಲು ಮುಂದಾಗಿದೆ.

‘ಮಹಾನಗರಗಳಾಚೆಗೂ ಎರಡು ಮತ್ತು ಮೂರನೇ ಹಂತದ ನಗರಗಳಿಗೆ ವಹಿವಾಟು ವಿಸ್ತರಿಸಲು ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಸಣ್ಣ ನಗರಗಳಲ್ಲಿ ಫ್ರಾಂಚೈಸಿ ಮಾದರಿಯಲ್ಲಿ 500 ಮಳಿಗೆ ಆರಂಭಿಸಲಾಗುವುದು’ ಎಂದು ಕಂಪನಿಯ ಸಿಇಒ ಸಂದೀಪ್‌ ಕಟಾರಿಯಾ ಹೇಳಿದ್ದಾರೆ.

ಕರ್ನಾಟಕದಲ್ಲಿ ಚಿಕ್ಕಬಳ್ಳಾಪುರ, ಗದಗ–ಬೆಟಗೇರಿ, ಹರಿಹರ, ದೊಡ್ಡಬಳ್ಳಾಪುರ, ಚಿಂತಾಮಣಿ, ಚನ್ನಪಟ್ಟಣ, ಚಾಮರಾಜನಗರ, ದಾಂಡೇಲಿ, ಕೊಳ್ಳೇಗಾಲ ಮತ್ತು ಹಾವೇರಿ ನಗರಗಳಲ್ಲಿ ಮಳಿಗೆಗಳನ್ನು ಆರಂಭ ಮಾಡಲು ಉದ್ದೇಶಿಸಿದೆ. 

Post Comments (+)