ಬಿಇಎಂಎಲ್‌: ಸ್ವದೇಶಿ ನಿರ್ಮಿತ ಎಲೆಕ್ಟ್ರಿಕ್‌ ಡಂಪರ್‌ ಅನಾವರಣ

7

ಬಿಇಎಂಎಲ್‌: ಸ್ವದೇಶಿ ನಿರ್ಮಿತ ಎಲೆಕ್ಟ್ರಿಕ್‌ ಡಂಪರ್‌ ಅನಾವರಣ

Published:
Updated:
Deccan Herald

ಮೈಸೂರು: ನಗರದಲ್ಲಿರುವ ಭಾರತ್‌ ಅರ್ತ್‌ ಮೂವರ್ಸ್‌ ಲಿಮಿಟೆಡ್ (ಬಿಇಎಂಎಲ್‌) ಕಾರ್ಖಾನೆಯು ಸಂಪೂರ್ಣ ದೇಶಿ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಿಸಿರುವ ದೇಶದ ಮೊದಲ ವಿದ್ಯುತ್‌ ಚಾಲಿತ (ಎಲೆಕ್ಟ್ರಿಕ್‌) ಡಂಪರ್‌ ಬಿಡುಗಡೆಗೊಳಿಸಿದೆ.

‘ಬಿಎಚ್‌150ಎಚ್‌’ ಹೆಸರಿನ 150 ಟನ್‌ ಸಾಮರ್ಥ್ಯದ ಎಲೆಕ್ಟ್ರಿಕ್‌ ಡಂಪರ್‌ ಅನ್ನು ಇದುವರೆಗೆ ಸ್ಥಳೀಯವಾಗಿ ನಿರ್ಮಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಈ ತಂತ್ರಜ್ಞಾನವಿರುವ ವಿದೇಶಿ ಕಂಪೆನಿಗಳ ಸಾಲಿಗೆ ಭಾರತೀಯ ಕಂಪನಿಯೂ ಸೇರಿದಂತಾಗಿದೆ.

ಈ ಡಂಪರ್‌ನಲ್ಲಿ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು ಅತಿ ಹೆಚ್ಚು ಮೈಲೇಜ್‌ ಹಾಗೂ ಸುಧಾರಿತ ಕಾರ್ಯಕ್ಷಮತೆ ತೋರಿಸಲು ಸಾಧ್ಯವಾಗಿದೆ. ಇಳಿಜಾರು ಹಾಗೂ ಎತ್ತರದ ಸ್ಥಳಗಳಿಗೆ ಅನಾಯಾಸವಾಗಿ ಸಾಗುವ ಶಕ್ತಿ ಇದಕ್ಕಿದೆ. ಸುಲಭವಾಗಿ ಸಾಮಗ್ರಿಗಳನ್ನು ತುಂಬುವಂತೆ ವಿನ್ಯಾಸ ಮಾಡಲಾಗಿದೆ.

ಈ ಡಂಪರ್‌ ಅನ್ನು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬುಧವಾರ ಮೈಸೂರಿನ ಕಾರ್ಖಾನೆಯಲ್ಲಿ ಬಿಇಎಲ್‌ ಸಿಎಂಡಿ ದೀಪಕ್‌ ಕುಮಾರ್ ಹೋಟಾ ಬಿಡುಗಡೆಗೊಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 15

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !