ಮಂಗಳವಾರ, ನವೆಂಬರ್ 19, 2019
23 °C

ಬಿಇಎಂಎಲ್‌ ವಿಪ್ರೊ ಒಪ್ಪಂದ

Published:
Updated:

ಬೆಂಗಳೂರು: ಕೃತಕ ಬುದ್ಧಿಮತ್ತೆ, ಅಂತರಿಕ್ಷ, ಕೈಗಾರಿಕೆಗಳಲ್ಲಿ ಸ್ವಯಂಚಾಲನೆ, 3ಡಿ ಪ್ರಿಂಟಿಂಗ್ ಕ್ಷೇತ್ರಗಳಲ್ಲಿ ಜತೆಗೂಡಿ ಕೆಲಸ ಮಾಡುವ ಉದ್ದೇಶದಿಂದ ಬಿಇಎಂಎಲ್‌ ಮತ್ತು ವಿಪ್ರೊ ಇನ್‌ಫ್ರಾಸ್ಟ್ರಕ್ಚರ್‌ ಎಂಜಿನಿಯರಿಂಗ್‌ (ಡಬ್ಲ್ಯುಐಎನ್‌)  ಒಪ್ಪಂದ ಮಾಡಿಕೊಂಡಿವೆ.

ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಕಂಪನಿಯೊಂದಿಗಿನ ವಿಪ್ರೊದ ಮೊದಲ ಪಾಲುದಾರಿಕೆ ಇದಾಗಿದೆ ಎಂದು ಜಂಟಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಕೇಂದ್ರ ಸರ್ಕಾರದ ಭಾರತದಲ್ಲಿಯೇ ತಯಾರಿಸಿ ಕಾರ್ಯಕ್ರಮಕ್ಕೆ ಉತ್ತಮ ಕೊಡುಗೆ ನೀಡುವಲ್ಲಿ ಈ ಒಪ್ಪಂದ ಎರಡೂ ಕಂಪನಿಗಳಿಗೆ ನೆರವಾಗಲಿದೆ’ ಎಂದು ಬಿಇಎಂಎಲ್‌ ಸಿಎಂಡಿ ಡಿ.ಕೆ. ಹೋಟಾ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)