ಬೆಂಗಳೂರು: ‘ಕರ್ನಾಟಕದ ಬಾಗ್ಮನೆ ಸಂಸ್ಥೆಯ ಸಾಧನೆಗೆ ಇಡೀ ದೇಶ ಹೆಮ್ಮೆಪಡುತ್ತಿದೆ. 20 ಕೋಟಿ ಚದರ ಅಡಿ ವಿಸ್ತಾರದಲ್ಲಿ ಎ–ಗ್ರೇಡ್ ಕಚೇರಿ ಜಾಗವನ್ನು ಹೊಂದಿರುವ ಇದು ಭಾರತದಲ್ಲೇ ಅತಿ ದೊಡ್ಡದಾಗಿದೆ, ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಮುಂಬೈನ ರಾಷ್ಟ್ರೀಯ ಷೇರು ಪೇಟೆಯಲ್ಲಿ ಗುರುವಾರ ಬಾಗ್ಮನೆ ಕೇಂದ್ರ ಕಚೇರಿ ಹಮ್ಮಿಕೊಂಡಿದ್ದ ‘ಬೆಲ್ ರಿಂಗಿಂಗ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಬಾಗ್ಮನೆ ಪ್ರಗತಿ ಎಂದರೆ ಅದು ಕರ್ನಾಟಕದ ಪ್ರಗತಿ. ಬೆಂಗಳೂರು ಪ್ರತಿಭಾವಂತ ಮಾನವ ಸಂಪನ್ಮೂಲಗಳಿಗೆ ಹೆಸರಾಗಿದೆ. ಮೂರು ದಶಕಗಳ ಪಯಣದಲ್ಲಿ ಸಂಸ್ಥೆ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಬೆಳವಣಿಗೆ ಹಿಂದೆ ಬಹಳಷ್ಟು ಕಠಿಣ ಪರಿಶ್ರಮವಿದೆ. ಆರ್ಥಿಕ ಪ್ರಗತಿಗಿಂತ ಗಳಿಸಿರುವ ನಂಬಿಕೆ ದೊಡ್ಡದಿದೆ. ಮಾಲೀಕರಾದ ರಾಜಾ ಮತ್ತು ಅವರ ಕುಟುಂಬ ಕೊಟ್ಟಿರುವ ನಂಬಿಕೆ ಅಪಾರ’ ಎಂದರು.

‘ನೀವು ವೇಗವಾಗಿ ಸಾಗಬೇಕಾದರೆ ಒಬ್ಬರೇ ಸಾಗಬೇಕು. ಬಹುದೂರ ಸಾಗಬೇಕಾದರೆ ಎಲ್ಲರೊಂದಿಗೆ ಸೇರಿ ಸಾಗಬೇಕು ಎಂದು ರತನ್ ಟಾಟಾ ಹೇಳಿದ್ದರು. ಅದೇ ರೀತಿ ಬಾಗ್ಮನೆ ಸಂಸ್ಥೆ ಮಾಲೀಕ ರಾಜಾ ಅವರು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಪ್ರಗತಿಯ ಹಾದಿಯಲ್ಲಿ ಸಾಗುತ್ತಿದ್ದಾರೆ’ ಎಂದು ಹೇಳಿದರು.

‘ಕರ್ನಾಟಕ ಪ್ರತಿ ವರ್ಷ 1 ಲಕ್ಷ ಐಟಿ ವೃತ್ತಿಪರರನ್ನು ಸೃಷ್ಟಿಸುತ್ತಿದೆ. ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಇದ್ದರೆ, ಬೆಂಗಳೂರಿನಲ್ಲಿ 26 ಲಕ್ಷ ಎಂಜಿನಿಯರ್ ವೃತ್ತಿಪರರಿದ್ದಾರೆ. ವಿದೇಶಿ ಪಾಸ್ಪೋರ್ಟ್ ಹೊಂದಿರುವ 2 ಲಕ್ಷ ಮಂದಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ 16 ಕಿ.ಮೀ ರಸ್ತೆಯಲ್ಲೇ 16 ಲಕ್ಷ ಎಂಜಿನಿಯರ್ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ಬೆಂಗಳೂರಿನ ಶಕ್ತಿ’ ಎಂದು ಬಣ್ಣಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-51-745446033

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.