ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಿರುವ ಫ್ಲ್ಯಾಟ್ಗಳ ದರ ವರ್ಷದಲ್ಲಿ ಶೇ 25ರಿಂದ 50ರಷ್ಟು ಹೆಚ್ಚಾಗಿದೆ. ಬೆಂಗಳೂರು ಪೂರ್ವ ಭಾಗದ ಕೋನದಾಸಪುರದಲ್ಲಿ 1 ಬಿಎಚ್ಕೆ ಫ್ಲ್ಯಾಟ್ ದರ ₹51 ಲಕ್ಷ, 3 ಬಿಎಚ್ಕೆ ಫ್ಲ್ಯಾಟ್ ದರ ₹1.44 ಕೋಟಿ ಇದ್ದು, ಈ ದರಗಳು ಗ್ರೇಡ್ ‘ಎ’ ಡೆವಲಪರ್ಗಳು ಮಾರಾಟ ಮಾಡುವ ಅಪಾರ್ಟ್ಮೆಂಟ್ಗಳ ಬೆಲೆಗೆ ಸಮಾನವಾಗಿದೆ.

ಪ್ರಾಧಿಕಾರವು ಈಗ ‘ಸ್ಕಂದಗಿರಿ’ ಅಪಾರ್ಟ್ಮೆಂಟ್ ಯೋಜನೆ ಆರಂಭಿಸಿದೆ. ಒಟ್ಟು 16 ಟವರ್ಗಳಲ್ಲಿ 1,488 ಫ್ಲ್ಯಾಟ್ಗಳು ಒಳಗೊಂಡಿದೆ. ಈ ಪೈಕಿ 488 ಫ್ಲ್ಯಾಟ್ಗಳನ್ನು ಸೇನಾ ವಸತಿ ಕಲ್ಯಾಣ ಸಂಘಕ್ಕೆ ಈಗಾಗಲೇ ಮಾರಾಟ ಮಾಡಲಾಗಿದೆ.

ಮಾಹಿತಿ ಪ್ರಕಾರ ಒಂದು ಬಿಎಚ್ಕೆ 645 ಚದರ ಅಡಿ ವಿಸ್ತೀರ್ಣ ಮತ್ತು ಮೂರು ಬಿಎಚ್ಕೆ 1,444 ಚದರ ಅಡಿ ವಿಸ್ತೀರ್ಣ ಪ್ರದೇಶ ಒಳಗೊಂಡಿದೆ. ಎಂಟು ಟವರ್ಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, 2027ರ ಮಾರ್ಚ್ ಗಡುವು ನೀಡಲಾಗಿದೆ. ಉಳಿದ ಟವರ್ ಗಳು ಇನ್ನೂ ನಿರ್ಮಾಣ ಹಂತದಲ್ಲಿವೆ.

ಈಜುಕೊಳ, ಬ್ಯಾಡ್ಮಿಂಟನ್ ಕೋರ್ಟ್, ಜಿಮ್ನಾಷಿಯಂ, ಯೋಗ ಕೇಂದ್ರ ಮುಂತಾದ ಸೌಲಭ್ಯ ನೀಡುವ ಭರವಸೆ ನೀಡಲಾಗಿದೆ. ಆದರೆ, ಬಿಡಿಎ ಇನ್ನೂ ಕಾಮಗಾರಿ ಆರಂಭಿಸಿಲ್ಲ.

ಈ ಹಿಂದೆ ಪ್ರಾಧಿಕಾರವು ಪಕ್ಕದ ಜಾಗದಲ್ಲಿ ಇದೇ ರೀತಿಯ ವಸತಿ ಯೋಜನೆ ಕೈಗೆತ್ತಿಕೊಂಡಿತು. ಗಮನಿಸ ಬೇಕಾದ ವಿಷಯವೆಂದರೆ ಎರಡು ಬಿಎಚ್ಕೆ ಫ್ಲ್ಯಾಟ್ಗಳನ್ನು ವರ್ಷದ ಹಿಂದೆ ₹52 ಲಕ್ಷಕ್ಕೆ ಮಾರಾಟ ಮಾಡಲಾಗಿತ್ತು. ಅಂದರೆ ಪ್ರತಿ ಚದರ ಅಡಿಗೆ ₹6,451. ಈಗ ಬಿಡಿಎ ಒಂದು ಮತ್ತು ಮೂರು ಬಿಎಚ್ಕೆ ಫ್ಲ್ಯಾಟ್ಗಳಿಗೆ ಕ್ರಮವಾಗಿ ಪ್ರತಿ ಚದರ ಅಡಿಗೆ ₹8 ಸಾವಿರದಿಂದ ₹10 ಸಾವಿರವರೆಗೆ ದರ ನಿಗದಿಪಡಿಸಿದೆ.

ಫ್ಲ್ಯಾಟ್ಗಳನ್ನು ಬುಕ್ ಮಾಡುವ ನಿರೀಕ್ಷೆಯೊಂದಿಗೆ ಬಂದಿದ್ದ ಅನೇಕರು ದರ ಕೇಳಿ ನಿರಾಸೆಗೊಂಡರು.

ಫ್ಲ್ಯಾಟ್ಗಳ ದರ ಏರಿಕೆಯನ್ನು ಸರ್ಮರ್ಥಿಸಿಕೊಂಡಿರುವ ಬಿಡಿಎ ಅಧಿಕಾರಿ, ‘ಖಾಸಗಿ ಬಿಲ್ಡರ್ಗಳು ಒದಗಿಸುವ ಅನೇಕ ಸೌಲಭ್ಯಗಳನ್ನು ಈ ಯೋಜನೆಯಲ್ಲೂ ಕಲ್ಪಿಸಲಾಗಿದೆ. ಈ ಸೌಲಭ್ಯಗಳಿಗೆ ಇತ್ತೀಚೆಗಷ್ಟೇ ಅನುಮೋದನೆ ದೊರೆತಿದ್ದು, ಪೂರ್ಣ ಗೊಳಿಸಲು ಒಂದು ವರ್ಷ ಬೇಕಾಗುತ್ತದೆ. ನಾಗರಿಕ ಸೌಲಭ್ಯಗಳಿಗೆ ಸುಮಾರು 1.2 ಎಕರೆ ಜಮೀನು ಮೀಸಲಿಡಲಾಗಿದೆ. ಖಾಸಗಿ ಡೆವಲಪರ್ಗಳು ಪ್ರಾಧಿಕಾರ ಕ್ಕಿಂತ ಹೆಚ್ಚು ದರ ಉಲ್ಲೇಖಿಸುತ್ತಿದ್ದಾರೆ’ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-4-123176176

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.