ಬೆಂಗಳೂರು: ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ ತಯಾರಿಸಿದ ‘ಕಲ್ಪಕೃತಿ’ ಬ್ರ್ಯಾಂಡ್ ಹೆಸರಿನ 6 ಸಾವಿರ ಡಚ್ ಮಾದರಿಯ ಮ್ಯಾಟ್ಗಳನ್ನು ಜೈಪುರಕ್ಕೆ ಸರಬರಾಜು ಮಾಡಲಾಯಿತು.

ವಿಧಾನಸೌಧದ ಮುಂಭಾಗ ಶನಿವಾರ ಸರಕು ತುಂಬಿದ ವಾಹನಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಸಿರು ನಿಶಾನೆ ತೋರಿದರು.

ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ್ ಮಾತನಾಡಿ, ‘ತೆಂಗಿನ ನಾರಿನ ಉತ್ಪನ್ನಗಳಿಗೆ ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಅಸ್ಸಾಂ, ಕೋಲ್ಕತ್ತ ಸೇರಿ ವಿವಿಧ ರಾಜ್ಯಗಳಿಂದ ಬೇಡಿಕೆ ಇದೆ. ಕಳೆದ ಬಾರಿ ದೆಹಲಿಗೆ ಸರಬರಾಜು ಮಾಡಲಾಗಿತ್ತು. ಇದೀಗ ಜೈಪುರಕ್ಕೆ ಪೂರೈಸಲಾಗಿದೆ. ಈ ಉತ್ಪನ್ನಗಳ ತಯಾರಿಕೆಯಿಂದ ಗ್ರಾಮೀಣ ಭಾಗದಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಲಭಿಸಿದೆ’ ಎಂದು ತಿಳಿಸಿದರು.

‘ಕಲ್ಪಕೃತಿ ಹೆಸರಿನಲ್ಲಿ ನಿಗಮದ ಉತ್ಪನ್ನಗಳನ್ನು ಮಾರಾಟ ಮಾಡಲುಜೈಪುರದಲ್ಲಿ ಅನಿಲ್ ಕುಮಾರ್ ಎಂಬುವರನ್ನು ಏಜೆಂಟರಾಗಿ ನಿಯೋಜಿಸಿದ್ದು, ಮೇ 9ರಂದು ಮಾರಾಟ ಮಳಿಗೆ ಉದ್ಘಾಟನೆಯಾಗಲಿದೆ. ಮಹಿಳೆಯರು ಕೈಯಿಂದಲೇ ಹೆಣೆದ ತೆಂಗಿನ ನಾರಿನ ಡಚ್ ಮ್ಯಾಟ್ಗಳು, ಕಾರಿಡಾರ್ ಮ್ಯಾಟ್, ರೋಲಿಂಗ್ ಮ್ಯಾಟ್, ಕಾಯರ್ ಹಾಸಿಗೆ, ದಿಂಬು ಸೇರಿ ₹15 ಲಕ್ಷ ಮೌಲ್ಯದ ಉತ್ಪನ್ನಗಳನ್ನು ಜೈಪುರಕ್ಕೆ ಸರಬರಾಜು ಮಾಡಲಾಗುತ್ತಿದೆ’ ಎಂದು ವಿವರಿಸಿದರು.

‘ವಿವಿಧ ಅಳತೆಯ ಏಳು ಬಗೆಯ ಮ್ಯಾಟ್ಗಳನ್ನು ತಯಾರಿಸಲಾಗುತ್ತಿದ್ದು, ಉದಾಹರಣೆಗೆ ಒಂದು ಮ್ಯಾಟ್ ತಯಾರಿಕೆಗೆ ₹91 ವೆಚ್ವವಾದರೆ, ಇದರಲ್ಲಿ ₹45 ಕೆಲಸಗಾರರಿಗೆ ಸಿಗುತ್ತದೆ’ ಎಂದು ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಎಚ್.ಕೆ.ರಾಜಶೇಖರ್ ಮಾಹಿತಿ ನೀಡಿದರು.

ಶಾಲಿನಿ ರಜನೀಶ್ ಮಾತನಾಡಿ, ‘ರಾಜ್ಯದ ವಿವಿಧೆಡೆ ತೆಂಗು ಬೆಳೆಯಲಾಗುತ್ತಿದೆ. ರಾಜ್ಯ ತೆಂಗು ನಾರಿನ ಅಭಿವೃದ್ಧಿ ನಿಗಮವು ತೆಂಗಿನ ಕಚ್ಚಾ ವಸ್ತುಗಳನ್ನು ಬಳಸಿ ಡಚ್ ಮ್ಯಾಟ್, ಕಾರಿಡಾರ್ ಮ್ಯಾಟ್ ಸೇರಿದಂತೆ ಹಲವು ಮೌಲ್ಯವರ್ಧಿತ ಗೃಹೋಪಯೋಗಿ ಉತ್ಪನ್ನ ತಯಾರಿಸಿ ಮಾರಾಟ ಮಾಡುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-4-533702354

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.