ಬೆಂಗಳೂರು: ‘ವಿದೇಶಿ ನೇರ ಬಂಡವಾಳ ಹೂಡಿಕೆ ಗಮನಾರ್ಹವಾಗಿ ಕಡಿಮೆಯಾಗಿದೆ. ಜಾಗತಿಕ ಹೂಡಿಕೆದಾರರು ಭಾರತವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಗತ್ಯ ಪ್ರಮಾಣದಲ್ಲಿ ಬಂಡವಾಳ ತೊಡಗಿಸುತ್ತಿಲ್ಲ’ ಎಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತ ನಾಗೇಶ್ವರನ್ ಹೇಳಿದರು.

ಶನಿವಾರ ಇಲ್ಲಿ ನಡೆದ ‘ಪ್ಯಾನ್ ಐಐಟಿ ಹಳೆಯ ವಿದ್ಯಾರ್ಥಿಗಳ ಸಮಾವೇಶ 2026’ ಉದ್ಘಾಟನಾ ಸಮಾರಂಭದಲ್ಲಿ ನೀತಿ ನಿರೂಪಕರು, ತಂತ್ರಜ್ಞರು, ಉದ್ಯಮಿಗಳು, ಹೂಡಿಕೆದಾರರು ಮತ್ತು ಕೈಗಾರಿಕೋದ್ಯಮಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜಾಗತಿಕ ಆರ್ಥಿಕತೆಯನ್ನು ಮರುರೂಪಿಸುತ್ತಿರುವ ರಚನಾತ್ಮಕ ಬದಲಾವಣೆಗಳು ಹಾಗೂ ಉತ್ಪಾದನೆ, ಇಂಧನ, ಕೃತಕ ಬುದ್ಧಿಮತ್ತೆ, ಪ್ರತಿಭೆ ಮತ್ತು ಭೌಗೋಳಿಕ ರಾಜಕೀಯದಲ್ಲಿ ಭಾರತಕ್ಕಿರುವ ಅವಕಾಶಗಳ ಬಗ್ಗೆ ಅವರು ವಿವರಿಸಿದರು.

2024 ರ ಹಣಕಾಸು ವರ್ಷದಲ್ಲಿ ದೇಶದ ಸರಕು ವ್ಯಾಪಾರ ಕೊರತೆಯು ಜಿಡಿಪಿಯ ಶೇಕಡ 8.5 ರಷ್ಟಿತ್ತು. ತೈಲ ಮತ್ತು ಕಲ್ಲಿದ್ದಲು ಆಮದುಗಳನ್ನು ಹೊರತುಪಡಿಸಿದ ನಂತರವೂ ಕೊರತೆಯು ಜಿಡಿಪಿಯ ಶೇಕಡ 3.5 ರಷ್ಟಿತ್ತು. ಮುಂಬರುವ ದಶಕಗಳನ್ನು ಯಾವುದೇ ಒಂದು ಸರ್ಕಾರ ಮಾತ್ರವಲ್ಲದೆ, ದೇಶದ ನಾಗರಿಕರು, ಸಂಸ್ಥೆಗಳು ಮತ್ತು ಉದ್ಯಮದ ನಾಯಕರ ಸಾಮೂಹಿಕ ಆಯ್ಕೆಗಳು ನಿರ್ಧರಿಸಲಿವೆ ಎಂದರು.

ಉತ್ಪಾದನಾ ವಲಯದ ಕುರಿತು ಮಾತನಾಡಿದ ಅವರು, ಭಾರತವು ಸಿದ್ಧ ಉಡುಪುಗಳು, ಪಾದರಕ್ಷೆಗಳು ಮತ್ತು ಆಹಾರ ಸಂಸ್ಕರಣೆಯಂತಹ ಶ್ರಮದಾಯಕ ವಲಯಗಳ ಮೇಲೆ ಗಮನ ಹರಿಸಬೇಕು. ಜೊತೆಗೆ ಸೆಮಿಕಂಡಕ್ಟರ್ಗಳು, ಬ್ಯಾಟರಿಗಳು, ಸುಧಾರಿತ ಎಲೆಕ್ಟ್ರಾನಿಕ್ಸ್ ಮತ್ತು ವಿಶೇಷ ರಾಸಾಯನಿಕ ಕ್ಷೇತ್ರಗಳಲ್ಲಿ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದರು.

ಭಾರತಕ್ಕೆ ಪ್ರತಿವರ್ಷ ಕನಿಷ್ಠ ಎಂಟು ಮಿಲಿಯನ್ (80 ಲಕ್ಷ) ಹೊಸ ಉದ್ಯೋಗಗಳು ಅಥವಾ ಜೀವನೋಪಾಯ ಅವಕಾಶಗಳು ಅಗತ್ಯವಾಗಿವೆ ಎಂದು ಅಭಿಪ್ರಾಯಪಟ್ಟರು.

ಆರ್ಟ್ ಆಫ್ ಲಿವಿಂಗ್ನ ಶ್ರೀ ಶ್ರೀ ರವಿಶಂಕರ್ ಮಾತನಾಡಿದರು. ಸಮಾವೇಶವನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ಉದ್ಘಾಟಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-18-2069970155

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.