ಬೆಂಗಳೂರು: ‘ಕೈಗಾರಿಕೆಗಳು, ದೂರಸಂಪರ್ಕ ನೆಟ್ವರ್ಕ್ ಟವರ್ ನಿರ್ವಾಹಕರು, ಮಾಲ್ಗಳಂತಹ ಸಾಂಸ್ಥಿಕ ಬಳಕೆದಾರರು ಪೆಟ್ರೋಲ್ ಬಂಕ್ಗಳಿಂದ ಡೀಸೆಲ್ ಖರೀದಿಸುತ್ತಿರುವ ಕಾರಣಕ್ಕೆ, ಇಂಧನ ಅಭಾವದ ಸ್ಥಿತಿ ತಲೆದೋರುತ್ತಿದೆ’ ಎಂದು ಪ್ರಧಾನಿ ಕಾರ್ಯಾಲಯಕ್ಕೆ ಇಂಡಿಯನ್ ಆಯಿಲ್ ಡೀಲರ್ಸ್ ಸಂಘ ಪತ್ರ ಬರೆದಿದೆ.

‘ಬಂಕ್ಗಳಲ್ಲಿ ಮಾರಾಟವಾಗುವ ಡೀಸೆಲ್ ಬೆಲೆ ₹92– ₹95ರಷ್ಟು (ಪ್ರತಿ ಲೀಟರ್ಗೆ) ಇದೆ. ಸಾಂಸ್ಥಿಕ ಬಳಕೆದಾರರು ತೈಲ ಕಂಪನಿಗಳಿಂದಲೇ ನೇರವಾಗಿ ಡೀಸೆಲ್ ಖರೀದಿಸಬೇಕು ಎಂಬ ನಿಬಂಧನೆಯಿದ್ದು, ಅಲ್ಲಿ ಪ್ರತಿ ಲೀಟರ್ನ ಬೆಲೆ ₹127–₹128ರಷ್ಟು ಇದೆ. ಬಂಕ್ಗಳಲ್ಲಿ ಖರೀದಿಸಿದರೆ, ಪ್ರತಿ ಲೀಟರ್ ಮೇಲೆ ಸುಮಾರು ₹30ರಷ್ಟು ಉಳಿತಾಯವಾಗುತ್ತದೆ. ಈ ಕಾರಣದಿಂದ ಸಾಂಸ್ಥಿಕ ಬಳಕೆದಾರರು ಬಂಕ್ಗಳಲ್ಲೇ ಖರೀದಿಸುತ್ತಿದ್ದಾರೆ’ ಎಂದು ಸಂಘವು ತನ್ನ ಪತ್ರದಲ್ಲಿ ವಿವರಿಸಿದೆ.

‘ಸಾಂಸ್ಥಿಕ ಬಳಕೆದಾರರು ಬಂಕ್ಗಳಲ್ಲಿ ಡೀಸೆಲ್ ಖರೀದಿಸುತ್ತಿರುವ ಕಾರಣದಿಂದ, ಅಂತಹ ಬಂಕ್ಗಳಲ್ಲಿ ವಾಡಿಕೆಗಿಂತ ಹೆಚ್ಚು ಇಂಧನ ಮಾರಾಟವಾಗುತ್ತಿದೆ. ಹಿಂದಿನ ಮಾರಾಟ ಪ್ರಮಾಣ ಮತ್ತು ಈಗಿನ ಮಾರಾಟ ಪ್ರಮಾಣದಲ್ಲಿ ಭಾರಿ ವ್ಯತ್ಯಾಸ ಇರುವುದರಿಂದ ಕಂಪನಿಯು, ಬಂಕ್ಗಳ ವಹಿವಾಟಿನ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದೆ. ಇಂತಹ ಪ್ರಕರಣಗಳನ್ನು ‘ಅಸಹಜ ಮಾರಾಟ’ ಎಂದು ಪರಿಗಣಿಸಿ, ತೈಲ ಪೂರೈಕೆಯನ್ನು ಸ್ಥಗಿತಗೊಳಿಸುತ್ತಿದೆ.ಇಲ್ಲವೇ ಪೂರೈಕೆ ಪ್ರಮಾಣವನ್ನು ಕಡಿಮೆ ಮಾಡುತ್ತಿದೆ’ ಎಂದು ಸಂಘವು ಆರೋಪಿಸಿದೆ.

‘ಬಂಕ್ಗಳು ಯಾವ ನಿಯಮವನ್ನು ಉಲ್ಲಂಘಿಸದೇ ಇದ್ದರೂ, ತೈಲ ಪೂರೈಕೆಯಿಂದ ವಂಚಿತವಾಗಬೇಕಾದ ಸ್ಥಿತಿ ಇದೆ. ಪರಿಣಾಮವಾಗಿ ದೈನಂದಿನ ವಹಿವಾಟಿಗೆ ಅಡಚಣೆಯಾಗುತ್ತಿದೆ ಮತ್ತು ಎಂದಿನ ಗ್ರಾಹಕರನ್ನು ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ. ಹಲವು ಬಂಕ್ಗಳು ಈಗಾಗಲೇ ನಷ್ಟ ಎದುರಿಸುತ್ತಿದ್ದು, ಕಾರ್ಯಾಚರಣೆ ಸ್ಥಗಿತಗೊಳಿಸಿವೆ’ ಎಂದು ಅಸಹಾಯಕತೆ ತೋಡಿಕೊಂಡಿದೆ.

‘ಈ ವಿಚಾರದಲ್ಲಿ ಪ್ರಧಾನಿ ಕಾರ್ಯಾ ಲಯವು ಕೂಡಲೇ ಮಧ್ಯಪ್ರವೇಶಿಸಬೇಕು. ಸಾಂಸ್ಥಿಕ ಬಳಕೆದಾರರು ತೈಲ ಕಂಪನಿಗಳಿಂದ, ತೈಲ ಕಂಪನಿಗಳ ಡಿಪೊಗಳಿಂದ ಮಾತ್ರವೇ ಡೀಸೆಲ್ ಖರೀದಿಸಬೇಕು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು. ಬಂಕ್ಗಳು ಎದುರಿಸುತ್ತಿರುವ ಸಮಸ್ಯೆ ಯನ್ನು ಬಗೆಹರಿಸಬೇಕು’ ಎಂದು ಮನವಿ ಮಾಡಿಕೊಂಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-51-454891027

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.