ನವದೆಹಲಿ (ಪಿಟಿಐ): ಮಾರ್ಚ್ ತ್ರೈಮಾಸಿಕದಲ್ಲಿ ದೇಶದ ಪ್ರಮುಖ ಎಂಟು ನಗರಗಳಲ್ಲಿ ಮನೆಗಳ ಮಾರಾಟ ಶೇ 2ರಷ್ಟು ಇಳಿಕೆ ಆಗಿದೆ. ಆದರೆ, ಇದೇ ಅವಧಿಯಲ್ಲಿ ಬೆಂಗಳೂರಿನಲ್ಲಿ ಮನೆಗಳ ಮಾರಾಟ ಶೇ 33ರಷ್ಟು ಹೆಚ್ಚಳವಾಗಿದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಪ್ರಾಪ್ ಟೈಗರ್ ಸಿದ್ಧಪಡಿಸಿದ ವರದಿ ಹೇಳಿದೆ.

ಕಳೆದ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಈ ನಗರಗಳಲ್ಲಿ ಒಟ್ಟು 98,095 ಮನೆಗಳು ಮಾರಾಟ ವಾಗಿದ್ದವು. ಆದರೆ, ಈ ಬಾರಿ 95,973 ಮನೆಗಳು ಮಾರಾಟವಾಗಿವೆ ಎಂದು ತಿಳಿಸಿದೆ.

ಮನೆಗಳಿಗೆ ಬೇಡಿಕೆ ಇಳಿಕೆ ಆಗಿರುವುದು ಮತ್ತು ಕಡಿಮೆ ಬೆಲೆಯ ಹೊಸ ಮನೆಗಳ ಪೂರೈಕೆಯಲ್ಲಿ ಇಳಿಕೆ ಆಗಿರುವುದರಿಂದ ಮನೆ ಮಾರಾಟ ಕಡಿಮೆ ಆಗಿದೆ ಎಂದು ತಿಳಿಸಿದೆ.

ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ–ಎನ್ಸಿಆರ್, ಹೈದರಾಬಾದ್, ಕೋಲ್ಕತ್ತ, ಎಂಎಂಆರ್ (ಮುಂಬೈ, ನವಿ ಮುಂಬೈ ಮತ್ತು ಥಾಣೆ) ಮತ್ತು ಪುಣೆ ಎಂಟು ಪ್ರಮುಖ ನಗರಗಳಾಗಿವೆ.

ಬೆಂಗಳೂರಿನಲ್ಲಿ ಕಳೆದ ವರ್ಷದ ಇದೇ ಅವಧಿಯಲ್ಲಿ 11,731 ಮನೆಗಳು ಮಾರಾಟವಾಗಿದ್ದರೆ,ಈ ಬಾರಿ 15,603 ಮನೆಗಳು ಮಾರಾಟವಾಗಿದ್ದು, ಶೇ 33ರಷ್ಟು ಏರಿಕೆ ದಾಖಲಿಸಿದೆ ಎಂದು ತಿಳಿಸಿದೆ.

ಬೆಂಗಳೂರಿನಲ್ಲಿ ಹೊಸ ಮನೆಗಳ ಪೂರೈಕೆ (15,806) ಮತ್ತು ಮಾರಾಟವು (15,603) ಸಮಾನ ಮಟ್ಟದಲ್ಲಿದೆ ಎಂದು ಹೇಳಿದೆ.

ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ) ಮತ್ತು ನವೋದ್ಯಮಗಳು ಉದ್ಯೋಗ ಸೃಷ್ಟಿಯ ಎಂಜಿನ್ಗಳಾಗಿ ಮುಂದುವರಿದಿವೆ. ಇದು ಬೆಂಗಳೂರಿ ನಲ್ಲಿ ಮನೆಗಳಿಗೆ ಬೇಡಿಕೆ ಹೆಚ್ಚಳಕ್ಕೆ ಒಂದು ಕಾರಣವಾಗಿದೆ ಎಂದು ತಿಳಿಸಿದೆ.

ಕಳೆದ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಚೆನ್ನೈನಲ್ಲಿ 4,774 ಮನೆಗಳು ಮಾರಾಟವಾಗಿದ್ದರೆ, ಈ ಬಾರಿ 6,841 ಮನೆ ಮಾರಾಟವಾಗಿವೆ. ಹೈದರಾಬಾದ್ನಲ್ಲಿ ಮನೆ ಮಾರಾಟ ಶೇ 25ರಷ್ಟು ಹೆಚ್ಚಳವಾಗಿದ್ದು, 13,297 ಮಾರಾಟವಾಗಿವೆ. ದೆಹಲಿ ಎನ್ಸಿಆರ್ ನಲ್ಲಿ 9,447 ಮನೆ ಮಾರಾಟವಾಗಿದ್ದು, ಶೇ 11ರಷ್ಟು ಏರಿಕೆ ಕಂಡಿದೆ.

ಆದರೆ, ಮನೆಗಳ ಮಾರಾಟವು ಎಂಎಂಆರ್ ಶೇ 15, ಪುಣೆ ಶೇ 21, ಕೋಲ್ಕತ್ತ ಶೇ 24 ಮತ್ತು ಅಹಮದಾಬಾದ್ನಲ್ಲಿ ಶೇ 23ರಷ್ಟು ಇಳಿದಿದೆ. ಎಂಟೂ ನಗರಗಳಲ್ಲಿ ವರ್ಷದಿಂದ ವರ್ಷಕ್ಕೆ ಮನೆಗಳ ಬೆಲೆಯಲ್ಲಿ ಏರಿಕೆ ಆಗಿದೆ ಎಂದು ಹೇಳಿದೆ.

‘ಜಿಸಿಸಿಗಳು, ನವೋದ್ಯಮಗಳು, ಡೀಪ್–ಟೆಕ್ ಕಂಪನಿಗಳು ಹಾಗೂ ಜಾಗತಿಕ ನಾವೀನ್ಯ ಕೇಂದ್ರಗಳ ವಿಸ್ತರಣೆಯು ಹೆಚ್ಚು ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ. ಇದು ವಸತಿ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಉಂಟು ಮಾಡಿದೆ’ ಎಂದು ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಕಂಪನಿ ‘ಸಂಜೀವಿನಿ ಸಮೂಹ’ದ ಅಧ್ಯಕ್ಷ ಉಮೇಶ್ ಗೌಡ ಎಚ್.ಎ ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-51-785540188

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.