ಮಂಗಳೂರು: ಭಾರತೀಯ ರೈಲ್ವೆ, ಸೌತ್ ಸ್ಟಾರ್ ರೈಲ್ ಇಂಡಿಯಾ ಮತ್ತು ಟೂರ್ ಟೈಮ್ಸ್ ಸಹಯೋಗದಲ್ಲಿ ಭಾರತ್ ಗೌರವ್ ರೈಲು ಯೋಜನೆಯಡಿ ಈಶಾನ್ಯ ಭಾರತದ ತಾಣಗಳಿಗೆ ಬೇಸಿಗೆ ವಿಶೇಷ ಪ್ರವಾಸ ಏರ್ಪಡಿಸಲಾಗಿದೆ. ಈ ಪ್ರವಾಸಿ ರೈಲು ಏ. 25 ರಂದು ಮಧುರೈನಿಂದ ಹೊರಡಲಿದೆ ಎಂದು ಸಂಸ್ಥೆಯ ನಿರ್ದೇಶಕ ವಿಘ್ನೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಈ ಪ್ರವಾಸದ ಒಂದು ಪ್ಯಾಕೇಜ್ನಲ್ಲಿ ಗ್ಯಾಂಗ್ಟಾಕ್, ಡಾರ್ಜಿಲಿಂಗ್ಗೆ ಭೇಟಿ ನೀಡಬಹುದು. ಇನ್ನೊಂದು ಪ್ಯಾಕೇಜ್ ಗುವಾಹಟಿ, ಶಿಲ್ಲಾಂಗ್, ಚಿರಾಪುಂಜಿ, ಮಾವ್ಲಿನ್ನಾಂಗ್ ಮತ್ತು ದಾವ್ಕಿ ತಾಣಗಳನ್ನು ಒಳಗೊಂಡಿದೆ. ಮತ್ತೊಂದು ಪ್ಯಾಕೇಜ್ ಮೂಲಕ ಭೂತಾನ್ಗೆ ಅಂತರರಾಷ್ಟ್ರೀಯ ಪ್ರವಾಸ ಕೈಗೊಳ್ಳಬಹುದಾಗಿದ್ದು, ಇದು ಥಿಂಪು, ಪುನಾಖಾ, ಪಾರೋ ಮತ್ತು ಚೆಲೆ ಲಾ ಪಾಸ್ ಮುಂತಾದ ತಾಣಗಳನ್ನು ಸಂದರ್ಶಿಸಬಹುದು’ ಎಂದು ತಿಳಿಸಿದರು.

‘ಈ ಪ್ರವಾಸಕ್ಕೆ ಐಆರ್ಸಿಟಿಸಿ ವೆಬ್ಸೈಟ್ನಲ್ಲಿ ಬುಕ್ ಮಾಡಲು ಅವಕಾಶವಿಲ್ಲ. ಟೂರ್ ಟೈಮ್ಸ್ ಅನ್ನು ನೇರವಾಗಿ ಸಂಪರ್ಕಿಸಿ (ಮೊ: 7305858585) ಅಥವಾ ಅದರ ವೆಬ್ಸೈಟ್ ( www.tourtimes.in) ಮೂಲಕ ಟಿಕೆಟ್ ಕಾಯ್ದಿರಿಸಬಹುದು. ಮಂಗಳೂರಿನವರು ಪಾಲಕ್ಕಾಡ್, ಒತ್ತಪಾಲಂ ಅಥವಾ ತ್ರಿಶ್ಶೂರ್ ಮೂಲಕ ಮಧುರೈ ತಲುಪುವುದಕ್ಕೆ ಹಾಗೂ ಪ್ರವಾಸ ಮುಗಿದ ಬಳಿಕ ಮಧುರೈನಿಂದ ಮಂಗಳೂರಿಗೆ ಮರಳುವುದಕ್ಕೆ ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗುತ್ತದೆ’ ಎಂದರು.

‘ಪ್ರವಾಸಿಗರು ಆಯ್ಕೆ ಮಾಡಿಕೊಳ್ಳುವ ಬೋಗಿಗೆ ಅನುಗುಣವಾಗಿ ಪ್ರತಿ ಪ್ಯಾಕೇಜ್ದ ದರ ನಿಗದಿಪಡಿಸಲಾಗುತ್ತದೆ. ಪ್ರತಿ ವ್ಯಕ್ತಿಗೆ ಕನಿಷ್ಠ ₹ 45,950ರಿಂದ ₹ 97,900ರಷ್ಟು ದರದ ಪ್ಯಾಕೇಜ್ಗಳಿವೆ. ಶಿಕ್ಷಕರು, ಸೈನಿಕರು ಹಾಗೂ ಪತ್ರಕರ್ತರಿಗೆ ಶೇ 5ರಷ್ಟು ರಿಯಾಯಿತಿ ಲಭ್ಯ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-29-278913295

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.