ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್‌ಪೆ ಕಂಪನಿಯ ಅಶ್ನೀರ್ ಗ್ರೋವರ್ ಪತ್ನಿ ಮಾಧುರಿ ಗ್ರೋವರ್ ವಜಾ

Last Updated 23 ಫೆಬ್ರುವರಿ 2022, 15:58 IST
ಅಕ್ಷರ ಗಾತ್ರ

ನವದೆಹಲಿ: ಭಾರತ್‌ಪೆ ಕಂಪನಿಯು ಅಶ್ನೀರ್ ಗ್ರೋವರ್ ಅವರ ಪತ್ನಿ ಮಾಧುರಿ ಜೈನ್ ಗ್ರೋವರ್ ಅವರನ್ನು ಕರ್ತವ್ಯದಿಂದ ವಜಾಗೊಳಿಸಿದೆ.

ಅಶ್ನೀರ್ ಅವರು ಕಂಪನಿಯ ಸಹಸಂಸ್ಥಾಪಕರು. ಮಾಧುರಿ ಅವರು ಹಣಕಾಸಿನ ಅಕ್ರಮ ಎಸಗಿದ್ದಾರೆ, ನಕಲಿ ಇನ್‌ವಾಯ್ಸ್ ಸಲ್ಲಿಸಿದ್ದಾರೆ ಎಂಬ ಆರೋಪದ ಅಡಿಯಲ್ಲಿ ವಜಾ ಮಾಡಲಾಗಿದೆ.

ಈ ವಿಚಾರವಾಗಿ ಮಾಧುರಿ ಅವರ ಪ್ರತಿಕ್ರಿಯೆ ದೊರೆತಿಲ್ಲ. ಅವರನ್ನು ಹಿಂದಿನ ತಿಂಗಳು ರಜೆಯ ಮೇಲೆ ಕಳುಹಿಸಲಾಗಿತ್ತು. ಮಾಧುರಿ ಅವರು ಕುಟುಂಬದ ಸದಸ್ಯರಿಗೆ ಅಮೆರಿಕ ಮತ್ತು ದುಬೈಗೆ ಪ್ರವಾಸ ಆಯೋಜಿಸಿದ್ದರ ವೆಚ್ಚಗಳನ್ನು ಸಹ ಕಂಪನಿಗೆ ಹೊರಿಸಿದ್ದರು ಎಂದೂ ಅವರ ವಿರುದ್ಧ ಆರೋಪ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT