ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ಟೆಲ್‌ನ ಜೂನ್‌ ತ್ರೈಮಾಸಿಕದ ಲಾಭ ಐದು ಪಟ್ಟು ಏರಿಕೆ

Last Updated 8 ಆಗಸ್ಟ್ 2022, 14:36 IST
ಅಕ್ಷರ ಗಾತ್ರ

ನವದೆಹಲಿ: ದೂರಸಂಪರ್ಕ ಸೇವಾ ಕಂಪನಿ ಭಾರ್ತಿ ಏರ್‌ಟೆಲ್‌ನ ಜೂನ್‌ ತ್ರೈಮಾಸಿಕದ ಲಾಭ ಐದು ಪಟ್ಟು ಹೆಚ್ಚಳ ಆಗಿದೆ. ಕಂಪನಿಯು ಜೂನ್‌ ತ್ರೈಮಾಸಿಕದಲ್ಲಿ ₹ 1,607 ಕೋಟಿ ಲಾಭ ಗಳಿಸಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹ 283.5 ಕೋಟಿ ಲಾಭ ಗಳಿಸಿತ್ತು. ಕಂಪನಿಯ ಕಾರ್ಯಾಚರಣೆ ವರಮಾನವು ಜೂನ್ ತ್ರೈಮಾಸಿಕದಲ್ಲಿ ₹ 32,805 ಕೋಟಿಗೆ ಹೆಚ್ಚಳವಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಾರ್ಯಾಚರಣೆ ವರಮಾನವು ₹ 26,854 ಕೋಟಿ ಆಗಿತ್ತು.

ಕಂಪನಿಯು ಭಾರತದಲ್ಲಿ ಒದಗಿಸುತ್ತಿರುವ ಮೊಬೈಲ್‌ ಸೇವೆಗಳಿಂದ ಬರುವ ವರಮಾನವು ಜೂನ್ ತ್ರೈಮಾಸಿಕದಲ್ಲಿ ಶೇ 27ರಷ್ಟು ಹೆಚ್ಚಾಗಿದ್ದು ₹ 18,220 ಕೋಟಿಗೆ ತಲುಪಿದೆ. ಇದು ಹಿಂದಿನ ವರ್ಷದ ಜೂನ್ ತ್ರೈಮಾಸಿಕದಲ್ಲಿ ₹ 14,305 ಕೋಟಿ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT