ಭಾರ್ತಿ ಆಕ್ಸಾ10 ಸಾವಿರ ವಿಮೆ ಸಲಹೆಗಾರರ ನೇಮಕ

ಶನಿವಾರ, ಮಾರ್ಚ್ 23, 2019
24 °C

ಭಾರ್ತಿ ಆಕ್ಸಾ10 ಸಾವಿರ ವಿಮೆ ಸಲಹೆಗಾರರ ನೇಮಕ

Published:
Updated:

ಬೆಂಗಳೂರು: ಭಾರ್ತಿ ಆಕ್ಸಾ ಲೈಫ್ ಇನ್ಶೂರೆನ್ಸ್‌, ಪ್ರಸಕ್ತ ಹಣಕಾಸು ವರ್ಷದಲ್ಲಿ 10 ಸಾವಿರ ವಿಮೆ ಸಲಹೆಗಾರರನ್ನು ನೇಮಕ ಮಾಡಿಕೊಳ್ಳಲು ಮತ್ತು 50 ಹೊಸ ಶಾಖೆಗಳನ್ನು ಆರಂಭಿಸಲು ನಿರ್ಧರಿಸಿದೆ.

ದೇಶದಾದ್ಯಂತ ಸೇವಾ ವಿತರಣಾ ಜಾಲ ವಿಸ್ತರಿಸಲು ಸಂಸ್ಥೆಯು ಈ ಕ್ರಮ ಕೈಗೊಂಡಿದೆ. ಕಂಪನಿಯಲ್ಲಿ ಸದ್ಯಕ್ಕೆ 28,638 ವಿಮೆ ಸಲಹೆಗಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಹೊಸದಾಗಿ 50 ಶಾಖೆಗಳನ್ನು ಆರಂಭಿಸುವುದರಿಂದ ಶಾಖೆಗಳ ಸಂಖ್ಯೆ 236ಕ್ಕೆ ಏರಲಿದೆ.

‘ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ವಹಿವಾಟು ವಿಸ್ತರಣಾ ಪ್ರಕ್ರಿಯೆ ಕೈಗೊಳ್ಳಲಾಗಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವಿಕಾಸ್ ಸೇಠ್‌ ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !