ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮ ಜುವೆಲರ್ಸ್‌ನ ರಾಯಭಾರಿ ಆಗಿ ಪೂಜಾ ಹೆಗ್ಡೆ ನೇಮಕ

Last Updated 16 ಜನವರಿ 2022, 16:02 IST
ಅಕ್ಷರ ಗಾತ್ರ

ಬೆಂಗಳೂರು: ಭೀಮ ಜುವೆಲರ್ಸ್‌ನ ‌ಮೊದಲ ರಾಯಭಾರಿ ಆಗಿ ನಟಿ ಪೂಜಾ ಹೆಗ್ಡೆ ಅವರನ್ನು ನೇಮಿಸಲಾಗಿದೆ. ತನ್ನ 97 ವರ್ಷಗಳ ಇತಿಹಾಸದಲ್ಲಿ ಬ್ರ್ಯಾಂಡ್ ರಾಯಭಾರಿಯನ್ನು ನೇಮಿಸುತ್ತಿರುವುದು ಇದೇ ಮೊದಲು ಎಂದು ಕಂಪನಿಯು ತಿಳಿಸಿದೆ.

‘ಹೊಸ ಮಾರುಕಟ್ಟೆಗಳು ಮತ್ತು ಹೊಸ ಗ್ರಾಹಕರನ್ನು ತಲುಪಲು ಪೂಜಾ ಹೆಗ್ಡೆ ಅವರು ನಮಗೆ ನೆರವಾಗಲಿದ್ದಾರೆ’ ಎಂದು ಭೀಮ ಜುವೆಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ವಿಷ್ಣುಶರಣ್‌ ಭಟ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಪ್ರಮುಖ ಬ್ರ್ಯಾಂಡ್‌ನೊಂದಿಗೆ ಸಹಭಾಗಿ ಆಗಿರುವುದು ನನಗೆ ಅತ್ಯಂತ ವಿಶೇಷವಾದ ಕ್ಷಣ’ ಎಂದು ಪೂಜಾ ಹೆಗ್ಡೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT