ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ಬಿಗ್‌ ಬಜಾರ್‌ನ ಸಬ್ಸೆ ಸಸ್ತೆ ದಿನ್‌

Last Updated 21 ಜನವರಿ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ದಿನಬಳಕೆಯ ಮತ್ತು ಗೃಹೋಪಯೋಗಿ ವೈವಿಧ್ಯಮಯ ಸರಕುಗಳ ಸರಣಿ ಮಾರಾಟ ಸಂಸ್ಥೆಯಾಗಿರುವ ಬಿಗ್‌ ಬಜಾರ್‌ನ ಮಳಿಗೆಗಳಲ್ಲಿ, ಇದೇ 23 ರಿಂದ 27ರವರೆಗೆ ‘ಸಬ್ಸೆ ಸಸ್ತೆ 5 ದಿನ್‌’ ಹೆಸರಿನ ಖರೀದಿ ಉತ್ಸವ ನಡೆಯಲಿದೆ.

‘ಅತ್ಯಂತ ಅಗ್ಗದ ಐದು ದಿನ’ ಹೆಸರಿನ ಈ ಮಾರಾಟ ಉತ್ಸವದಲ್ಲಿ, ‘ಅಬ್‌ 20% ಔರ್‌ ಭೀ ಸಸ್ತಾ’ (ಶೇ 20ರಷ್ಟು ಹೆಚ್ಚುವರಿ ಅಗ್ಗ) ಕೊಡುಗೆಯೂ ಇರಲಿದೆ.

ಫ್ಯೂಚರ್‌ ಪೇ ವಾಲೆಟ್‌ ಮೂಲಕ ₹ 3 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಖರೀದಿಗೆ ಶೇ 20ರಷ್ಟು ನಗದು ವಾಪಸ್‌ ಕೊಡುವ ಸೌಲಭ್ಯವೂ ಇರಲಿದೆ.

ಈ ಅವಧಿಯಲ್ಲಿ ಗ್ರಾಹಕರಿಗೆ ಬೆಲೆಗಳಲ್ಲಿ ಭಾರಿ ಕಡಿತ ಮತ್ತು ಆಕರ್ಷಕ ಕೊಡುಗೆಗಳನ್ನು ನೀಡಲಾಗುವುದು. ಕುಟುಂಬದ ಪ್ರತಿಯೊಬ್ಬ ಸದಸ್ಯ
ವ್ಯಾಪಕ ಶ್ರೇಣಿಯ ಸರಕು ಖರೀದಿಯಲ್ಲಿ ಬೆಲೆ ಕಡಿತದ ಪ್ರಯೋಜನ ಪಡೆಯಲಿದ್ದಾರೆ.

‘ನಮ್ಮೆಲ್ಲ ಗ್ರಾಹಕರು ಈ ವಿಶೇಷ ಮಾರಾಟವನ್ನು ಎದುರು ನೋಡುತ್ತಿದ್ದಾರೆ. ಅವರಿಗೆ ಉತ್ಪನ್ನಗಳ ಮಾರಾಟದ ಮೇಲೆ ಬೆಲೆ ಕಡಿತದ
ಜತೆಗೆ ಹೆಚ್ಚಿನದನ್ನು ಕೊಡಲು ನಾವು ಉದ್ದೇಶಿಸಿದ್ದೇವೆ. ಹೆಚ್ಚೆಚ್ಚು ಖರೀದಿಸಿದಷ್ಟು, ಹೆಚ್ಚು ಉಳಿತಾಯವಾಗಲಿದೆ. ಗುಣಮಟ್ಟದ ಉತ್ಪನ್ನಗಳು ಕಡಿಮೆ ಬೆಲೆಗೆ ದೊರೆಯಲಿವೆ’ ಎಂದು ಸಂಸ್ಥೆಯ ಸಿಇಒ ಸದಾಶಿವ ನಾಯಕ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT