ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಲಿಕಾಂ ಸೇವಾ ಶುಲ್ಕ ಹೆಚ್ಚಳ ಅನುಮಾನ

Last Updated 22 ಆಗಸ್ಟ್ 2021, 15:06 IST
ಅಕ್ಷರ ಗಾತ್ರ

ನವದೆಹಲಿ: ದೂರಸಂಪರ್ಕ ಸೇವಾ ಕಂಪನಿಗಳು ಮೊಬೈಲ್‌ ದೂರವಾಣಿ ಸೇವಾ ಶುಲ್ಕಗಳಲ್ಲಿ ಸಣ್ಣ ಪ್ರಮಾಣದ ಬದಲಾವಣೆ ತರಬಹುದು, ಅವು ಸೇವಾ ಶುಲ್ಕವನ್ನು ತಕ್ಷಣಕ್ಕೆ ಭಾರಿ ಪ್ರಮಾಣದಲ್ಲಿ ಹೆಚ್ಚಿಸುವ ಸಾಧ್ಯತೆ ಇಲ್ಲ ಎಂದು ಡೆಲಾಯ್ಟ್‌ ಇಂಡಿಯಾ ಕಂಪನಿಯ ಹಿರಿಯ ವಿಶ್ಲೇಷಕರೊಬ್ಬರು ಹೇಳಿದ್ದಾರೆ.

ಈ ಕ್ಷೇತ್ರದಲ್ಲಿ ಸವಾಲುಗಳು ಇದ್ದರೂ, ಬ್ರಾಡ್‌ಬ್ಯಾಂಡ್‌ ಹಾಗೂ 5ಜಿ ಸೇವೆಗಳಲ್ಲಿ ಬೆಳವಣಿಗೆಗೆ ಅವಕಾಶ ಇದೆ ಎಂದು ಪೀಯೂಷ್ ವೈಶ್ ಅವರು ಹೇಳಿದ್ದಾರೆ. ‘ಇದುವರೆಗೆ ಈ ಕಂಪನಿಗಳು, ಎಲ್ಲ ವರ್ಗಗಳಿಗೆ ಸೇರಿದ ಗ್ರಾಹಕರಿಗೂ ಒಂದೇ ಬಗೆಯ ಸೇವೆಗಳನ್ನು ನೀಡುತ್ತಿದ್ದವು. ಆದರೆ ಈಗ ಅವು ಹೆಚ್ಚಿನ ಸೇವೆಗಳಿಗೆ ಹೆಚ್ಚು ಮೊತ್ತ ಪಾವತಿಸಲು ಸಿದ್ಧವಿರುವ ಗ್ರಾಹಕರನ್ನು ಪಡೆಯುವುದು ಹೇಗೆ ಎಂಬ ಆಲೋಚನೆ ನಡೆಸಿವೆ’ ಎಂದು ವೈಶ್ ಹೇಳಿದ್ದಾರೆ.

ಕಂಪನಿಗಳು ಈ ರೀತಿಯಲ್ಲಿ ಆಲೋಚಿಸುತ್ತಿರುವುದರ ಪರಿಣಾಮವಾಗಿ, ಕೆಲವು ಯೋಜನೆಗಳ ಶುಲ್ಕದಲ್ಲಿ ತುಸು ಬದಲಾವಣೆ ಆಗಬಹುದಾದರೂ, ಎಲ್ಲ ಬಗೆಯ ಯೋಜನೆಗಳಿಗೂ ಅನ್ವಯವಾಗುವ ದೊಡ್ಡ ಮೊತ್ತದ ಏರಿಕೆ ಸದ್ಯಕ್ಕೆ ಇಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT