ಬೆಂಗಳೂರು: ಬಯೊಕಾನ್ ಲಿಮಿಟೆಡ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಶ್ರೀಹಾಸ್ ತಾಂಬೆ ಅವರು ನೇಮಕ ಆಗಿದ್ದಾರೆ.

ಏಪ್ರಿಲ್ 1ರಂದು ತಾಂಬೆ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಸಿಇಒ ಆಗಿ ಕಾರ್ಯನಿರ್ವಹಿಸಲಿರುವ ಶ್ರೀಹಾಸ್ ತಾಂಬೆ, ಬಯೊಸಿಮಿಲರ್ಸ್ ಮತ್ತು ಜೆನೆರಿಕ್ಸ್ಗಳನ್ನು ಒಳಗೊಂಡ ಸಂಯೋಜಿತ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ ಎಂದು ಬಯೊಕಾನ್ ಲಿಮಿಟೆಡ್ ಪ್ರಕಟಣೆಯಲ್ಲಿ ತಿಳಿಸಿದೆ.

ಇದೇ ವೇಳೆ ಕೇದಾರ್ ಉಪಾಧ್ಯೆ ಅವರನ್ನು ಬಯೊಕಾನ್ ಲಿಮಿಟೆಡ್ನ ಮುಖ್ಯ ಹಣಕಾಸು ಅಧಿಕಾರಿಯಾಗಿ (ಸಿಎಫ್ಒ) ಕಂಪನಿ ನೇಮಿಸಿದೆ.

ಮುಂಬೈ ವಿಶ್ವವಿದ್ಯಾಲಯದ ಐಸಿಟಿಯಿಂದ (ಯುಡಿಸಿಟಿ) ಬಯೊಪ್ರೊಸೆಸ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಶ್ರೀಹಾಸ್ ತಾಂಬೆ, ಬಯೊಕಾನ್ ಸಂಸ್ಥೆಯಲ್ಲಿ ಸುಮಾರು ಮೂರು ದಶಕಗಳ ಹಿಂದೆ ಮ್ಯಾನೇಜ್ಮೆಂಟ್ ಟ್ರೈನಿಯಾಗಿ ಸೇರಿಕೊಂಡು, ನಂತರ ಪ್ರಮುಖ ಹುದ್ದೆಗಳ ಮೂಲಕ ಜಾಗತಿಕ ಮಟ್ಟದಲ್ಲಿ ಕಂಪನಿಯ ವಹಿವಾಟುಗಳನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.