ನವದೆಹಲಿ: ಜೈವಿಕ ತಂತ್ರಜ್ಞಾನ ವಲಯದ ಪ್ರಮುಖ ಕಂಪನಿಯಾದ ಬಯೊಕಾನ್ಗೆ ಉತ್ತರಾಧಿಕಾರಿಯಾಗಿ ಸೋದರನ ಮಗಳು ‘ಕ್ಲೇರ್ ಮಜುಂದಾರ್’ ಅವರನ್ನು ಆಯ್ಕೆ ಮಾಡಿರುವುದಾಗಿ ಕಿರಣ್ ಮಜುಂದಾರ್ ಷಾ ಘೋಷಿಸಿದ್ದಾರೆ.

‘ಕ್ಲೇರ್ ಮಜುಂದಾರ್’ ಅವರನ್ನು ಬಯೊಕಾನ್ ಉತ್ತರಾಧಿಕಾರಿಯಾಗಿ ಆರಿಸಿಕೊಂಡಿರುವುದಾಗಿ 73 ವರ್ಷದ ಕಿರಣ್ ಮಜುಂದಾರ್ ಷಾ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದಾಗ್ಯೂ, ಈ ಉತ್ತರಾಧಿಕಾರ ಪ್ರಕ್ರಿಯೆಯು ತಕ್ಷಣವೇ ನಡೆಯುತ್ತಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

‘ನಾನು ಸದ್ಯಕ್ಕೆ ನಿವೃತ್ತಿ ಹೊಂದುವ ಆಲೋಚನೆಯಲ್ಲಿ ಇಲ್ಲ. ಕ್ಲೇರ್ ಅವರು ಕಾಲಕ್ರಮೇಣ ಹಂತ ಹಂತವಾಗಿ ನನ್ನ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ’ ಎಂದು ಷಾ ವಿವರಿಸಿದ್ದಾರೆ.

ಕ್ಲೇರ್ ಮಜುಂದಾರ್ ಯಾರು?

ಕಿರಣ್ ಮಜುಂದಾರ್ ಷಾ ಅವರ ಸಹೋದರ ರವಿ ಮಜುಂದಾರ್ ಅವರ ಪುತ್ರಿಯಾದ 37 ವರ್ಷದ ಕ್ಲೇರ್ ಮಜುಂದಾರ್, 2018ರಲ್ಲಿ ಬೋಸ್ಟನ್ ಮೂಲದ ‘ಬಿಕಾರಾ ಥೆರಪಿಟಿಕ್ಸ್’ (Bicara Therapeutics) ಎಂಬ ಕ್ಯಾನ್ಸರ್ ಚಿಕಿತ್ಸಾ ಕಂಪನಿಯನ್ನು ಸ್ಥಾಪಿಸಿದರು. ಅವರ ನೇತೃತ್ವದಲ್ಲಿ ಈ ಕಂಪನಿಯು 2024ರಲ್ಲಿ ನಾಸ್ಡಾಕ್ ಷೇರು ಮಾರುಕಟ್ಟೆಯಲ್ಲಿ ನೋಂದಣಿಯಾಗಿದೆ.

ರವಿ ಮಜುಂದಾರ್ ಅವರು ಬಯೊಕಾನ್ನ ನಿರ್ದೇಶಕರಾಗಿದ್ದಾರೆ. ಕ್ಲೇರ್ ಅವರು ‘ರಿಲೇ ಥೆರಪಿಟಿಕ್ಸ್’ ಮತ್ತು ’ನೂರಾ ಹೆಲ್ತ್’ ಮಂಡಳಿಗಳಲ್ಲೂ ಸದಸ್ಯೆಯಾಗಿದ್ದಾರೆ. ಎಂಐಟಿಯಿಂದ ಬಯೋಲಾಜಿಕಲ್ ಎಂಜಿನಿಯರಿಂಗ್ ಪದವೀಧರೆಯಾಗಿರುವ ಕ್ಲೇರ್, ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮತ್ತು ಕ್ಯಾನ್ಸರ್ ಬಯೋಲಜಿಯಲ್ಲಿ ಪಿಎಚ್ಡಿ ಪದವಿ ಪಡೆದಿದ್ದಾರೆ.

ಕ್ಲೇರ್ ಪೋಷಕರಿಬ್ಬರೂ ಅಮೆರಿಕದಲ್ಲಿ ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕರಾಗಿದ್ದಾರೆ. ಸಹೋದರ ಎರಿಕ್ ಅವರು ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕರಾಗಿದ್ದು, ಕೃತಕ ಬುದ್ಧಿಮತ್ತೆ (ಎಐ)ತಜ್ಞರಾಗಿದ್ದಾರೆ.

ಬಯೊಕಾನ್ ಯಶೋಗಾಥೆ...

ಭಾರತದ ಜೈವಿಕ ತಂತ್ರಜ್ಞಾನ ಉದ್ಯಮದ ಪ್ರಮುಖ ಕಂಪನಿಯಾದ ಬಯೊಕಾನ್ ಸಂಸ್ಥೆಯನ್ನು ಮಜುಂದಾರ್ ಷಾ ಅವರು 1978ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಿದ್ದರು. ನಾಲ್ಕು ದಶಕಗಳಲ್ಲಿ ಇದನ್ನು ಭಾರತದ ಅತಿದೊಡ್ಡ ಬಯೋಟೆಕ್ ಕಂಪನಿಯಾಗಿ ಬೆಳೆಸಿದ್ದಾರೆ. 1998ರಲ್ಲಿ ಸ್ಕಾಟ್ಲೆಂಡ್ನ ಜಾನ್ ಷಾ ಅವರನ್ನು ವಿವಾಹವಾದರು. ಜಾನ್ ಷಾ ಅವರು 2022ರಲ್ಲಿ ಕ್ಯಾನ್ಸರ್ನಿಂದ ನಿಧನರಾದರು.

ಕ್ಲೇರ್ ಅವರನ್ನು ಉತ್ತರಾಧಿಕಾರಿಯನ್ನಾಗಿ ಹೆಸರಿಸುವ ಸಂದರ್ಭದಲ್ಲಿ ಮಾತನಾಡಿದ ಮಜುಂದಾರ್ ಷಾ, ‘ಬಯೊಕಾನ್ ಕಂಪನಿಯು ಸಮರ್ಥ ಕೈಗಳಲ್ಲಿದೆ ಎಂಬುದನ್ನು ನಾನು ಖಚಿತಪಡಿಸಿಕೊಳ್ಳುತ್ತೇನೆ. ಕ್ಲೇರ್ ಅವರು ಕಂಪನಿಯನ್ನು ಸಮರ್ಥವಾಗಿ ನಡೆಸಬಲ್ಲರು ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ’ ಎಂದು ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.