ಭಾನುವಾರ, ಜೂಲೈ 5, 2020
27 °C

ಬಯೊಕಾನ್‌ ಲಾಭ ₹213 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೈವಿಕ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಸಂಸ್ಥೆ ಬಯೊಕಾನ್‌,  ಮಾರ್ಚ್‌ ಅಂತ್ಯಕ್ಕೆ ಕೊನೆಗೊಂಡ ನಾಲ್ಕನೆ ತ್ರೈಮಾಸಿಕದಲ್ಲಿ ₹ 213 ಕೋಟಿ ನಿವ್ವಳ ಲಾಭ ಗಳಿಸಿದೆ.

ವರ್ಷದ ಹಿಂದೆ ಇದೇ ಅವಧಿಯಲ್ಲಿನ ₹ 130 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ, ಈ ಬಾರಿಯ ಲಾಭದ ಪ್ರಮಾಣವು ಶೇ 64ರಷ್ಟು ಹೆಚ್ಚಳಗೊಂಡಿದೆ.

2018–19ರ ಹಣಕಾಸು ವರ್ಷದ ಒಟ್ಟಾರೆ ವರಮಾನವು ₹ 1,528 ಕೋಟಿಗಳಷ್ಟಾಗಿದೆ. ಒಂದು ವರ್ಷದ ಹಿಂದೆ ಈ ಮೊತ್ತವು ₹ 1,169 ಕೋಟಿಗಳಷ್ಟಿತ್ತು.ಬೋನಸ್‌ ಷೇರು: ಪ್ರತಿ ಷೇರಿಗೆ ಒಂದು ಬೋನಸ್‌ ಷೇರು (1;1) ನೀಡಲು ಸಂಸ್ಥೆಯ ನಿರ್ದೇಶಕ ಮಂಡಳಿಯು ತನ್ನ ಅನುಮೋದನೆ ನೀಡಿದೆ. ಪ್ರತಿಯೊಂದು ಷೇರಿಗೆ ₹ 5ರ ಮುಖಬೆಲೆಯ ಒಂದು ಬೋನಸ್‌ ಷೇರು ವಿತರಿಸಲಾಗುವುದು. ಬೋನಸ್‌ ಷೇರು ಸೇರ್ಪಡೆ ಮಾಡುವ ಮುಂಚೆ, ಪ್ರತಿ ಷೇರಿಗೆ ₹ 1ರಂತೆ ಅಂತಿಮ ಲಾಭಾಂಶ ನೀಡಲೂ ಸಂಸ್ಥೆ ಉದ್ದೇಶಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು