50 ಸಾವಿರ ಡಾಲರ್‌ನತ್ತ ಬಿಟ್‌ಕಾಯಿನ್ ಮೌಲ್ಯ

ಜನಪ್ರಿಯ ಕ್ರಿಪ್ಟೊಕರೆನ್ಸಿಗಳಲ್ಲಿ ಒಂದಾಗಿರುವ ಬಿಟ್‌ಕಾಯಿನ್ ಮೌಲ್ಯವು ಭಾನುವಾರ 50 ಸಾವಿರ ಅಮೆರಿಕನ್ ಡಾಲರ್ (₹ 36.29 ಲಕ್ಷ) ಸಮೀಪಿಸಿದೆ. ಭಾನುವಾರ ಬೆಳಿಗ್ಗೆ ಇದರ ಮೌಲ್ಯವು 48,800 ಅಮೆರಿಕನ್ ಡಾಲರ್ (₹ 35.42 ಲಕ್ಷ) ಆಗಿತ್ತು.
ಒಂದು ವರ್ಷದ ಹಿಂದಿನ ಮೌಲ್ಯಕ್ಕೆ ಹೋಲಿಸಿದರೆ ಬಿಟ್‌ಕಾಯಿನ್‌ನ ಈಗಿನ ಮೌಲ್ಯದಲ್ಲಿ ಶೇಕಡ 70ರಷ್ಟು ಹೆಚ್ಚಳವಾಗಿದೆ. ಕ್ರಿಪ್ಟೊಕರೆನ್ಸಿಗಳಲ್ಲಿ ಪಾವತಿ ಮಾಡುವುದನ್ನು ತಾನು ಒಪ್ಪಿಕೊಳ್ಳುವುದಾಗಿ ಟೆಸ್ಲಾ ಕಂಪನಿ ಈಚೆಗೆ ಪ್ರಕಟಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.