ಒಎನ್‌ಜಿಸಿ ಲಾಭ₹ 6,144 ಕೋಟಿ

7

ಒಎನ್‌ಜಿಸಿ ಲಾಭ₹ 6,144 ಕೋಟಿ

Published:
Updated:

ಬೆಂಗಳೂರು: ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು (ಒಎನ್‌ಜಿಸಿ), ಮೊದಲ ತ್ರೈಮಾಸಿಕದಲ್ಲಿ ₹ 6,144 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

ವರ್ಷದ ಹಿಂದಿನ ಇದೇ ಅವಧಿಯಲ್ಲಿನ ₹ 3,884 ಕೋಟಿಗೆ ಹೋಲಿಸಿದರೆ ಇದು ಶೇ 58ರಷ್ಟು ಹೆಚ್ಚಳವಾಗಿದೆ. ಇದು 2013ರ ಡಿಸೆಂಬರ್ ನಂತರದ (₹ 7,126 ಕೋಟಿ) ಗರಿಷ್ಠ ಲಾಭವಾಗಿದೆ. ವರಮಾನವು ಶೇ 43ರಷ್ಟು ಏರಿಕೆ
ಯಾಗಿ ₹ 27,213 ಕೋಟಿಗೆ ತಲುಪಿದೆ.

ಕೆಐಒಸಿಎಲ್‌ ವರಮಾನ ಹೆಚ್ಚಳ

ಬೆಂಗಳೂರು: ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಯು (ಕೆಐಒಸಿಎಲ್), ಮೊದಲ ತ್ರೈಮಾಸಿಕದಲ್ಲಿ ₹ 393 ಕೋಟಿಗಳಷ್ಟು ವರಮಾನ ಗಳಿಸಿದೆ.

‘ಹಿಂದಿನ ವರ್ಷದ ಇದೇ ಅವಧಿಯಲ್ಲಿನ ₹ 312 ಕೋಟಿಗೆ ಹೋಲಿಸಿದರೆ ಶೇ 26ರಷ್ಟು ಪ್ರಗತಿ ಕಂಡಿದೆ. ಈ ಹಿಂದಿನ ₹ 6.16 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ ಈ ಬಾರಿ ₹ 3.62 ಕೋಟಿ ನಷ್ಟಕ್ಕೆ ಗುರಿಯಾಗಿದೆ. ಇದಕ್ಕೆ ಹಿಂದಿನ ವರ್ಷದ 3ನೇ ತ್ರೈಮಾಸಿಕದಲ್ಲಿ ಘಟಕದ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದೇ ಕಾರಣ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಂ. ವಿ. ಸುಬ್ಬರಾವ್‌ ಹೇಳಿದ್ದಾರೆ.

ಮಹಿಳಾ ಉದ್ಯಮಿಗೆ ‘ಕೊವೆ’ ತರಬೇತಿ

ಬೆಂಗಳೂರು: ಮಹಿಳಾ ಉದ್ಯಮಿಗಳ ಒಕ್ಕೂಟದ (ಸಿಒಡಬ್ಲ್ಯುಇ–ಕೊವೆ) ಕರ್ನಾಟಕ ಘಟಕವು, ರಾಜ್ಯ ಸರ್ಕಾರದ ನೆರವಿನಿಂದ ಮಹಿಳೆಯರಿಗಾಗಿ ಮೂರು ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ.

ಇದೇ 9ರಿಂದ 11ರವರೆಗೆ ಈ ತರಬೇತಿ ನಡೆಯಲಿದೆ. ಉದ್ಯಮಶೀಲತಾ ಕೌಶಲ್ಯ ವೃದ್ಧಿ, ಸ್ಟಾರ್ಟ್‌ಅಪ್‌ ಸ್ಥಾಪನೆ ಕುರಿತು ಸಮಗ್ರ ತರಬೇತಿ ನೀಡಲಾಗುವುದು. ಆಸಕ್ತರು ‘ಕೊವೆ’ ಅಧ್ಯಕ್ಷೆ ರೂಪಾ ರಾಣಿ ಅವರನ್ನು (ಮೊ: 97407 10359) ಸಂಪರ್ಕಿಸಿ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !