ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್‌ಪುಟ್‌ ಕ್ರೆಡಿಟ್ ಟ್ಯಾಕ್ಸ್‌ ಅವಧಿ ವಿಸ್ತರಣೆ

Last Updated 3 ಜನವರಿ 2019, 19:19 IST
ಅಕ್ಷರ ಗಾತ್ರ

ನವದೆಹಲಿ: 2017–18ನೇ ಹಣಕಾಸು ವರ್ಷದ ಇನ್‌ಪುಟ್‌ಕ್ರೆಡಿಟ್ ಟ್ಯಾಕ್ಸ್‌ ಪಡೆಯಲು 2019ರ ಮಾರ್ಚ್‌ವರೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

ಈ ಹಿಂದಿನ ಆದೇಶದಂತೆ 2018ರ ಅಕ್ಟೋಬರ್‌ 25ಕ್ಕೆ ಗಡುವು ಮುಕ್ತಾಯವಾಗಿತ್ತು. ಆದರೆ, ಇನ್‌ವೈಯ್ಸ್‌, ತೆರಿಗೆ ಮತ್ತು ರಿಟರ್ನ್ಸ್‌ ಜತೆ ಹೊಂದಾಣಿಕೆ ಆಗುವಾಗ ಸಮಸ್ಯೆ ಎದುರಾಗುತ್ತಿರುವುದರಿಂದ ಅವಧಿ ವಿಸ್ತರಣೆ ಮಾಡಲಾಗಿದೆ.

ಅಂತಿಮ ರಿಟರ್ನ್ಸ್‌ ಜಿಎಸ್‌ಟಿಆರ್–1 ಸಲ್ಲಿಕೆಯಲ್ಲಿ ಯಾವುದೇ ಲೋಪ ದೋಷಗಳು ಆಗಿದ್ದರೆ, 2019ರ ಜನವರಿ–ಮಾರ್ಚ್‌ ಅವಧಿಗೆ ಸಲ್ಲಿಸುವ ರಿಟರ್ನ್ಸ್‌ಗಳಲ್ಲಿ ಅದನ್ನು ಸರಿಪಡಿಸಿ ಸಲ್ಲಿಸಬಹುದು ಎಂದು ಸಿಬಿಐಸಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT