ಮುಂಚೂಣಿಯಲ್ಲಿ ಒನ್‌ಪ್ಲಸ್‌

7

ಮುಂಚೂಣಿಯಲ್ಲಿ ಒನ್‌ಪ್ಲಸ್‌

Published:
Updated:

ಬೆಂಗಳೂರು: ಪ್ರೀಮಿಯಂ ಸ್ಮಾರ್ಟ್‍ಫೋನ್ ವಿಭಾಗದಲ್ಲಿ ಒನ್‌ಪ್ಲಸ್‌ ಅತ್ಯಧಿಕ ಪ್ರಮಾಣದಲ್ಲಿ ಮಾರಾಟವಾದ ಮೊಬೈಲ್‌ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕೌಂಟರ್‌ ಪಾಯಿಂಟ್ ಸಂಸ್ಥೆ ಬಿಡುಗಡೆ ಮಾಡಿರುವ 2018ರ ಸಾಲಿನ 4ನೇ ತ್ರೈಮಾಸಿಕದ ದೇಶಿ ಮೊಬೈಲ್‌ ಮಾರುಕಟ್ಟೆ ವರದಿಯಲ್ಲಿ ಈ ವಿವರಗಳಿವೆ. ಒನ್‍ಪ್ಲಸ್ ಕಂಪನಿಯು ಭಾರತದಲ್ಲಿನ ಸ್ಮಾರ್ಟ್‍ಫೋನ್ ಮಾರುಕಟ್ಟೆಯ ಶೇ 36 ರಷ್ಟು ಪಾಲನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. ಆ್ಯಪಲ್ ಮತ್ತು ಸ್ಯಾಮ್ಸಂಗ್  ಕ್ರಮವಾಗಿ ಶೇ 30 ಮತ್ತು ಶೇ 26 ರಷ್ಟು ಪಾಲನ್ನು ಹೊಂದಿ ಎರಡು ಮತ್ತು ಮೂರನೆ ಸ್ಥಾನದಲ್ಲಿ ಇವೆ.

ಪೇ ನಿಯರ್‌ಬೈ ಆ್ಯಪ್‌

ಗ್ರಾಮೀಣ ಪ್ರದೇಶಗಳಲ್ಲಿರುವ ವ್ಯಾಪಾರ-ವಹಿವಾಟುದಾರರು ಸಮರ್ಪಕವಾದ ಅಂತರ್ಜಾಲ ಸೌಲಭ್ಯ ಇಲ್ಲದಿದ್ದರೂ ಸುಲಭವಾಗಿ ಹಣ ವರ್ಗಾವಣೆ ಮಾಡುವಂತಹ ನೂತನ ಮತ್ತು ಸುಲಭ ಸೌಲಭ್ಯವನ್ನು ಪೇ ನಿಯರ್‌ಬೈ ಕಂಪನಿ ಪರಿಚಯಿಸಿದೆ. ಇದಕ್ಕಾಗಿ ಕಂಪನಿಯು ಫ್ರಾನ್ಸ್‌ನ ಮೊಬೈಲ್ ಕಂಪನಿಯಾದ ಬಿ-ಬೌಂಡ್ ಜತೆ ಒಪ್ಪಂದ ಮಾಡಿಕೊಂಡಿದೆ.

‘ಚಿಲ್ಲರೆ ವಹಿವಾಟುದಾರರು ಅಂತರ್ಜಾಲ ಸೌಲಭ್ ಇಲ್ಲದೇ ಇರುವ ಕಡೆಗಳಲ್ಲಿಯೂ ಪೇ ನಿಯರ್‌ಬೈ ಆ್ಯಪ್‌ ಬಳಸಿ ಹಣ ವರ್ಗಾಯಿಸಬಹುದು’ ಎಂದು ಕಂಪನಿ ಸಿಇಒ ಆನಂದ್‍ಕುಮಾರ್ ಬಜಾಜ್ ತಿಳಿಸಿದ್ದಾರೆ.

‘ಗ್ರಾಮಾಂತರ ಪ್ರದೇಶದ ಅಂಗಡಿ-ಮುಂಗಟ್ಟುಗಳನ್ನು ಅತ್ಯಾಧುನಿಕ ಮಾರ್ಟ್‍ಗಳಂತೆ ರೂಪಾಂತರಿಸಬೇಕೆಂಬುದು ನಮ್ಮ ಗುರಿಯಾಗಿದೆ. ಆಗ್ಮೆಂಟೆಡ್ ಕನೆಕ್ಟಿವಿಟಿ ಮುಖಾಂತರ ಗ್ರಾಮೀಣ ಪ್ರದೇಶಕ್ಕೆ ಡಿಜಿಟಲ್ ಸೇವೆಯನ್ನು ಕೊಂಡೊಯ್ಯುತ್ತಿದ್ದೇವೆ. ಇದರಿಂದಾಗಿ ಎಲ್ಲರನ್ನೂ ಒಳಗೊಂಡ ಸಮಗ್ರ ಬೆಳವಣಿಗೆ ಸಾಧ್ಯವಾಗಲಿದೆ’ ಎಂದು ಬಿ-ಬೌಂಡ್‍ನ ಸಹಸಂಸ್ಥಾಪಕ ಮತ್ತು ಅಧ್ಯಕ್ಷ ಯಾಝಿದ್ ಚಿರ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !