ಬೆಂಗಳೂರು: ಪಶ್ಚಿಮ ಏಷ್ಯಾದಲ್ಲಿ ಯುದ್ಧದಿಂದಾಗಿ ಬಿಟುಮಿನ್ ದರದಲ್ಲಿ ಹೆಚ್ಚಳವಾಗಿರುವುದರಿಂದ, ದರಪಟ್ಟಿಯನ್ನು ಪರಿಷ್ಕರಿಸಿ ಲೋಕೋಪಯೋಗಿ ಇಲಾಖೆ ಆದೇಶ ಹೊರಡಿಸಿದೆ.

‘ಬಿಟುಮಿನ್ ಕೊರತೆಯಿಂದಾಗಿ ಅದರ ದರ ಬಹಳಷ್ಟು ಹೆಚ್ಚಾಗಿದೆ. ಕಾಮಗಾರಿ ನಡೆಸುವ ಸಂದರ್ಭದಲ್ಲಿ ಯಾವುದಾದರೂ ಪ್ರಮುಖ ಸಾಮಗ್ರಿಯ ದರ ಅತಿಹೆಚ್ಚಾದರೆ ಅದಕ್ಕೆ ಅನುಗುಣವಾಗಿ ‘ಸ್ಟಾರ್ ರೇಟ್’ ನೀಡುವ ಪದ್ಧತಿ ಇದೆ. ರಸ್ತೆ ಕಾಮಗಾರಿಯಲ್ಲಿ ಮುಖ್ಯವಾಗಿರುವ ಬಿಟುಮಿನ್ ದರದಿಂದ ರಾಜ್ಯದಾದ್ಯಂತ ಗುತ್ತಿಗೆದಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ‘ಸ್ಟಾರ್ ರೇಟ್’ ನೀಡಬೇಕು’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಅವರು ಎಲ್ಲ ಇಲಾಖೆಗಳಿಗೆ ಮನವಿ ಪತ್ರ ಸಲ್ಲಿಸಿದ್ದರು.

ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರು ಮನವಿಗೆ ಸ್ಪಂದಿಸಿದ್ದು, ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದ ಇಲಾಖೆ, ಪರಿಷ್ಕೃತ ಬಿಟುಮಿನ್ ದರಗಳನ್ನು ಆಧರಿಸಿ ದರ ಪಟ್ಟಿಯಲ್ಲಿ ಐಟಂಗಳ ದರಗಳನ್ನು ಪರಿಷ್ಕರಿಸಿ ಏಪ್ರಿಲ್ 4ರಿಂದ ಅನ್ವಯವಾಗುವಂತೆ ಜಾರಿ ಮಾಡಲು ಆದೇಶಿಸಿದೆ.

₹300 ಕೋಟಿ ಬಿಡುಗಡೆ: ‘ರಾಜ್ಯದ ಗುತ್ತಿಗೆದಾರರ ಸಂಘದ ಹೋರಾಟದ ಫಲವಾಗಿ, ಲೋಕೋಪಯೋಗಿ ಇಲಾಖೆ ₹300 ಕೋಟಿ ಬಾಕಿ ಬಿಲ್ ಅನ್ನು ಬಿಡುಗಡೆ ಮಾಡಿದೆ. ಇದರಿಂದ ಸುಮಾರು 5 ಸಾವಿರ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ ಅನುಕೂಲ ವಾಗಲಿದೆ. ₹10 ಲಕ್ಷದವರೆಗಿನ ಬಿಲ್ ಪಾವತಿ ಮಾಡಲಾಗುತ್ತಿದೆ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ನಂದಕುಮಾರ್ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-51-46890759

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.