ಕಪ್ಪುಹಣ ಕಾಯ್ದೆ ಬಲಿಷ್ಠವಾಗಿದೆ: ರವಿಚಂದ್ರನ್ ರಾಮಸ್ವಾಮಿ

7
ಎಫ್‌ಕೆಸಿಸಿಐ ಸಂವಾದದಲ್ಲಿ ರವಿಚಂದ್ರನ್‌ ರಾಮಸ್ವಾಮಿ

ಕಪ್ಪುಹಣ ಕಾಯ್ದೆ ಬಲಿಷ್ಠವಾಗಿದೆ: ರವಿಚಂದ್ರನ್ ರಾಮಸ್ವಾಮಿ

Published:
Updated:
Deccan Herald

ಬೆಂಗಳೂರು: ‘ಕಪ್ಪುಹಣ ಕಾಯ್ದೆ ಬಲಿಷ್ಠವಾಗಿದೆ. ತೆರಿಗೆ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಯಾವುದೇ ರೀತಿಯಲ್ಲಿಯೂ ವಂಚನೆ ನಡೆಸಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಕರ್ನಾಟಕ ಮತ್ತು ಗೋವಾದ ಆದಾಯ ತೆರಿಗೆ ತನಿಖಾ ನಿರ್ದೇಶಕ ರವಿಚಂದ್ರನ್‌ ರಾಮಸ್ವಾಮಿ ತಿಳಿಸಿದರು.

ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘವು (ಎಫ್‌ಕೆಸಿಸಿಐ) ಆಯೋಜಿಸಿದ್ದ ‘ಕಪ್ಪುಹಣ ಕಾಯ್ದೆ’ ಕುರಿತ ಸಂವಾದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಬೇನಾಮಿ ಕಾಯ್ದೆ ಮತ್ತು ಕಪ್ಪು ಹಣ ಕಾಯ್ದೆಗಳಿಂದಾಗಿ ವಂಚನೆಯನ್ನು ಸುಲಭವಾಗಿ ಪತ್ತೆ ಮಾಡಲು ಸಾಧ್ಯವಾಗುತ್ತಿದೆ. ಕಪ್ಪುಹಣ ವರ್ಗಾವಣೆ ತಡೆಗೆ ವಿವಿಧ ದೇಶಗಳ ಮಧ್ಯೆ ಮಾಹಿತಿ ವಿನಿಮಯ ಒಪ್ಪಂದ ನಡೆದಿದೆ. 

‘ಫಾರಿನ್‌ ಅಕೌಂಟ್‌ ಟ್ಯಾಕ್ಸ್‌ ಕಾಂಪ್ಲಿಯನ್ಸ್‌ ಆ್ಯಕ್ಟ್‌ (ಫಟ್ಕಾ) ಮೂಲಕ ವಿದೇಶದಲ್ಲಿ ಖಾತೆ ಹೊಂದಿರುವ ಸಂಪೂರ್ಣ ಮಾಹಿತಿ ಒಂದು ವಾರದೊಳಗೆ ಪಡೆಯಲು ಸಾಧ್ಯ. 

‘ಕಪ್ಪುಹಣದ ಮೌಲ್ಯದ ಮೂರುಪಟ್ಟು ದಂಡ ವಿಧಿಸುವ ಜತೆಗೆ 3 ರಿಂದ 10ವರ್ಷಗಳವರೆಗೆ ಜೈಲು ಶಿಕ್ಷೆಯೂ ವಿಧಿಸಲು ಕಾಯ್ದೆಯಲ್ಲಿ ಅವಕಾಶ ಇದೆ. ದೇಶದಲ್ಲಿ ಇದುವರೆಗೆ 5 ಸಾವಿರ ಕೋಟಿ, ಕರ್ನಾಟಕ ಮತ್ತು ಗೋವಾದಲ್ಲಿ ಒಟ್ಟಾರೆ 600 ಪ್ರಕರಣಗಳ ವಿಚಾರಣೆ ಆರಂಭವಾಗಿದೆ’ ಎಂದು ತಿಳಿಸಿದರು. 

‘ಅಕ್ರಮ ಆಸ್ತಿ ಖರೀದಿಯ ಬಗ್ಗೆ ಮಾತ್ರವಲ್ಲದೆ, ಅಕ್ರಮ ಆದಾಯ ಹೊಂದಿದ್ದರೂ ಅದನ್ನೂ ಸುಲಭವಾಗಿ ಪತ್ತೆ ಹಚ್ಚಬಹುದು. ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕ್‌ಗಳು, ಚಿಟ್‌ ಫಂಡ್‌ಗಳು, ಎನ್‌ಬಿಎಫ್‌ಸಿಗಳಲ್ಲಿ ಇರುವ ಠೇವಣಿಗಳ ಬಗ್ಗೆಯೂ ಮಾಹಿತಿ ಸಿಗುತ್ತದೆ. ಹೀಗಾಗಿ ಬೇನಾಮಿ ವಹಿವಾಟುಗಳ ಬಗ್ಗೆ ಖಚಿತ ಮಾಹಿತಿ ಪಡೆಯಬಹುದಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !