ಸೋಮವಾರ, ಜೂಲೈ 6, 2020
23 °C

ಲಾಕ್‌ಡೌನ್‌ | ಆನ್‌ಲೈನ್‌ ಮಾರಾಟಕ್ಕೆ ಬಿಎಂಡಬ್ಲ್ಯು, ಮರ್ಸಿಡಿಸ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಲಾಕ್‌ಡೌನ್‌ ಇರುವುದರಿಂದ ಫೋಕ್ಸ್‌ವ್ಯಾಗನ್‌, ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್‌ ಕಂಪನಿಗಳು ಆನ್‌ಲೈನ್‌ ಮೂಲಕ ವಾಹನಗಳನ್ನು ಮಾರಾಟ ಮಾಡಲು ಮುಂದಾಗಿವೆ.

ಮನೆಯಲ್ಲಿ ಇದ್ದುಕೊಂಡೇ ವಾಹನಗಳನ್ನು ಬುಕ್‌ ಮಾಡುವ ಆಯ್ಕೆಯನ್ನು ಗ್ರಾಹಕರಿಗೆ ನೀಡಿವೆ.

ತನ್ನ ಮಾರಾಟ ಮತ್ತು ಸೇವೆಯನ್ನು ಡಿಜಿಟಲೀಕರಣ ಮಾಡುತ್ತಿರುವುದಾಗಿ ಫೋಕ್ಸ್‌ವ್ಯಾಗನ್‌ ತಿಳಿಸಿದೆ. ಇದು ಅತ್ಯಂತ ಸುಲಭ ಮತ್ತು ಸರಳ ಪ್ರಕ್ರಿಯೆಯಾಗಿದ್ದು, ಗ್ರಾಹಕರು ತಮಗೆ ಬೇಕಾದ ಮಾದರಿಯನ್ನು ಆಯ್ಕೆ ಮಾಡಬಹುದಾಗಿದೆ ಎಂದು ತಿಳಿಸಿದೆ.

ಭಾರತದ ಗ್ರಾಹಕರಿಗಾಗಿ ವಿಶಿಷ್ಟವಾದ ಸಂಪರ್ಕರಹಿತ ಅನುಭವ ಸಿಗಲಿದೆ. ಹೊಸ ಮತ್ತು ಹಳೆಯ ಬಿಎಂಡಬ್ಲ್ಯು ಕಾರ್‌ಗಳ ಖರೀದಿ, ಸೇವೆಗಳು ಮತ್ತು ಆನ್‌ಲೈನ್‌ ಪಾವತಿ ಆಯ್ಕೆಗಳು ಲಭ್ಯ ಇವೆ ಎಂದು ಬಿಎಂಡಬ್ಲ್ಯು ತಿಳಿಸಿದೆ.

ಮರ್ಸಿಡಿಸ್‌ ಬೆಂಜ್‌ ಕಂಪನಿಯು ತನ್ನ ಆನ್‌ಲೈನ್‌ ವೇದಿಕೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿದ್ದು, Merc from Home ಸೇರಿದಂತೆ ಇನ್ನೂ ಹಲವು ಗ್ರಾಹಕರ ಉತ್ತೇಜನಾ ಕ್ರಮಗಳನ್ನು ಜಾರಿಗೊಳಿಸಿದೆ. ಸಂಪೂರ್ಣವಾಗಿ ಡಿಜಿಟಲ್‌ ಪ್ರಕ್ರಿಯೆಯ ಮೂಲಕವೇ ಖರೀದಿಗೆ ಪ್ರಕ್ರಿಯೆಯ ವ್ಯವಸ್ಥೆ ಮಾಡಲಾಗಿದೆ ಎಂದೂ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು