ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಸಿದ ಕಾರು‌ ಮಾರುಕಟ್ಟೆ ಮೇಲೆ ಬಿಎಂಡಬ್ಲ್ಯು ಕಣ್ಣು

Last Updated 12 ಜುಲೈ 2020, 8:18 IST
ಅಕ್ಷರ ಗಾತ್ರ

ದೇಶದಲ್ಲಿ ಬಳಸಿದ ಕಾರ್‌ಗಳ (pre-owned) ಮಾರುಕಟ್ಟೆಗೆ ವಿಪುಲ ಅವಕಾಶಗಳಿವೆ. ಈ ವಹಿವಾಟಿನಲ್ಲಿ ಬೆಂಗಳೂರು ಮಾರುಕಟ್ಟೆಯೂ ದೊಡ್ಡದಿದೆ. ವಿಲಾಸಿ ಕಾರ್‌ ತಯಾರಿಸುವ ಜರ್ಮನಿಯ ಬಿಎಂಡಬ್ಲ್ಯು ಬಹುರಾಷ್ಟ್ರೀಯ ಕಂಪನಿಯ ಭಾರತದ ಅಂಗಸಂಸ್ಥೆಯಾಗಿರುವ ಬಿಎಂಡಬ್ಲ್ಯು ಗ್ರೂಪ್‌ ಇಂಡಿಯಾ, ಬಳಸಿದ ಕಾರ್‌ಗಳ (pre-owned) ವಹಿವಾಟನ್ನು ವಿಸ್ತರಿಸಲು ಮುಂದಾಗಿದೆ. ಬಳಸಿದ ಕಾರ್‌ಗಳ ಅತ್ಯುತ್ತಮ ಶ್ರೇಣಿಯ ಮತ್ತು ಪ್ರಮಾಣೀಕೃತ ವಾಹನಗಳ ಮಾರಾಟಕ್ಕೆ ಆದ್ಯತೆ ನೀಡಿರುವ ಕಂಪನಿಯು ಇದೇ ಉದ್ದೇಶಕ್ಕೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಪ್ರತ್ಯೇಕ ಷೋರೂಂ ಆರಂಭಿಸಿದೆ. ಇದು ಕಂಪನಿಯ ದೇಶದಲ್ಲಿಯೇ ದೊಡ್ಡದಾದ ಷೋರೂಂ ಆಗಿದೆ. ಬಿಎಂಡಬ್ಲ್ಯು ಇಂಡಿಯಾದ ವಾಹನಗಳ ಮಾರಾಟ ಮತ್ತು ಸೇವಾ ಮಳಿಗೆಗಳನ್ನು ನಿರ್ವಹಿಸುವ (ಡೀಲರ್‌) ನವನೀತ್‌ ಮೋಟರ್ಸ್‌, ಈ ಪೂರ್ವ– ಮಾಲಿಕತ್ವದ ಕಾರ್‌ಗಳ ಮಾರಾಟ ಕೇಂದ್ರ ನಿರ್ವಹಿಸಲಿದೆ.‌

‘ಬಿಎಂಡಬ್ಲ್ಯು ಪ್ರೀಮಿಯಂ ಸೆಲೆಕ್ಷನ್‌ನಡಿ ಗುಣಮಟ್ಟದ ವಾಹನಗಳಷ್ಟೇ ಇಲ್ಲಿ ಲಭ್ಯ ಇರಲಿವೆ. ವಿಲಾಸಿ ವಾಹನಗಳ ವಹಿವಾಟು ಮತ್ತು ಬಳಸಿದ ಕಾರ್‌ಗಳ ಮಾರುಕಟ್ಟೆಯಲ್ಲಿ ವ್ಯಾಪಕ ಅನುಭವ ಹೊಂದಿರುವ ನವನೀತ್‌ ಮೋಟರ್ಸ್‌ ಮಾಲೀಕತ್ವದ ಈ ಮಾರಾಟ ಕೇಂದ್ರವು ಬಿಎಂಡಬ್ಲ್ಯು ಬ್ರ್ಯಾಂಡ್‌ನ ಯಶಸ್ಸಿಗೆ ನೆರವಾಗಲಿದೆ. ಕಾರ್‌ಗಳ ಮಾರಾಟ ವಿಷಯದಲ್ಲಿ ಗರಿಷ್ಠ ಜಾಗರೂಕತೆ ವಹಿಸಲಾಗುತ್ತದೆ. ಮಾರಾಟಕ್ಕೆ ಸಿದ್ಧವಿರುವ ಕಾರ್‌ಗಳ ಆಯ್ಕೆಯಲ್ಲಿ ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಸಮಗ್ರ ಸ್ವರೂಪದ ಗುಣಮಟ್ಟದ ತಪಾಸಣೆಗೆ ಒಳಪಟ್ಟ ವಾಹನಗಳನ್ನೇ ಮಾರಾಟಕ್ಕೆ ಬಳಸಲಾಗುವುದು’ ಎಂದು ನವನೀತ್‌ ಮೋಟರ್ಸ್‌ನ ಡೀಲರ್ ಪ್ರಿನ್ಸಿಪಲ್ ಶರದ್‍ ಕಚಾಲಿಯಾ ಶರದ್‌ ಕಚಾಲಿಯಾ ಹೇಳುತ್ತಾರೆ.

ಇಲ್ಲಿ ಮಾರಾಟಕ್ಕೆ ಸಿದ್ಧ ಇರುವ ಪ್ರತಿಯೊಂದು ಕಾರ್‌ಗಳ ಸರ್ವಿಸ್‌, ನಿರ್ವಹಣೆ ಮತ್ತು ದುರಸ್ತಿಯ ಸಮಗ್ರ ಮಾಹಿತಿ ಲಭ್ಯ ಇರಲಿದೆ. 7,500 ಚದರ ಅಡಿಯ ಕೇಂದ್ರದಲ್ಲಿ 15 ಕಾರ್‌ಗಳನ್ನು ಪ್ರದರ್ಶಿಸಲು ವಿಶಾಲ ಸ್ಥಳಾವಕಾಶ ಇದೆ. ಖರೀದಿದಾರರು ಮಾರಾಟಕ್ಕೆ ಲಭ್ಯ ಇರುವ ವಾಹನಗಳ ಸಂಖ್ಯೆ, ಸದ್ಯದ ಇಂಧನ ಕ್ಷಮತೆ, ಮಾರಾಟ ದರ, ಕಾರ್‌ನ ವೈಶಿಷ್ಟ್ಯತೆ ಮತ್ತು ಡೀಲರ್‌ ಸಂಪರ್ಕ ವಿವರಗಳನ್ನು ವರ್ಚುವಲ್‌ ಪ್ರಾಡಕ್ಟ್‌ ಪ್ರೆಸೆಂಟೇಷನ್‌(ವಿಪಿಪಿ) ಮೂಲಕ ಸುಲಭವಾಗಿ ಪಡೆದುಕೊಳ್ಳಬಹುದು. ವಾಹನ ಖರೀದಿಗೆ ಆಕರ್ಷಕ ಹಣಕಾಸು ಸೌಲಭ್ಯವೂ ಇದೆ.

ಷೋರೂಂ, ವರ್ಕ್‌ಶಾಪ್‌ ಟೂಲ್ಸ್‌ ಮತ್ತು ಸಲಕರಣೆಗಳನ್ನು ಸಮಗ್ರವಾಗಿ ಸ್ಯಾನಿಟೈಷೇನ್‌ ಮಾಡಲಾಗಿರುತ್ತದೆ. ಖರೀದಿ ಮಾರಾಟ ವಹಿವಾಟಿನಲ್ಲಿ ಪರಸ್ಪರ ಅಂತರ ಸೇರಿದಂತೆ ಸುರಕ್ಷತಾ ಕ್ರಮಗಳನ್ನೆಲ್ಲ ಕಡ್ಡಾಯವಾಗಿ ಪಾಲಿಸಲಾಗುತ್ತಿದೆ ಎಂದೂ ಕಂಪನಿ ತಿಳಿಸಿದೆ.

ವೈಶಿಷ್ಟ್ಯತೆ

  1. 7,500 ಚದರ ಅಡಿಯ ವಿಶಾಲ ಷೋರೂಂ
  2. 15 ವಿಲಾಸಿ ಕಾರ್‌ಗಳ ಪ್ರದರ್ಶನ ಸ್ಥಳಾವಕಾಶ
  3. ವರ್ಚುವಲ್‌ ಪ್ರಾಡಕ್ಟ್‌ ಪ್ರೆಸೆಂಟೇಷನ್‌ ಮೂಲಕ ಮಾಹಿತಿ
  4. 5 ವರ್ಷಗಳಿಗಿಂತ ಕಡಿಮೆ ಹಳೆಯ ಕಾರ್‌ಗಳಷ್ಟೇ ಮಾರಾಟ
  5. ಎರಡು ವರ್ಷಗಳ ವಾರಂಟಿ ಸೌಲಭ್ಯ
  6. ವರ್ಷಪೂರ್ತಿ ರಸ್ತೆ ಬದಿ ನೆರವು ಪಡೆಯುವ ಆಯ್ಕೆಯೂ ಲಭ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT