ಮಂಗಳವಾರ, ಆಗಸ್ಟ್ 3, 2021
27 °C

ಬಿಎಂಡಬ್ಲ್ಯು: ಹೊಸ ಎಸ್‌ 1000 ಎಕ್ಸ್‌ಆರ್‌ ಬೈಕ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುರುಗ್ರಾಮ: ಬಿಎಂಡಬ್ಲ್ಯು ಮೋಟಾರ್ಡ್‌ ಕಂಪನಿಯು ತನ್ನ ಅಡ್ವೆಂಚರ್‌ ಸ್ಪೋರ್ಟ್‌ ಬೈಕ್‌ ಬಿಎಂಡಬ್ಲ್ಯು ಎಸ್‌ 1000 ಎಕ್ಸ್‌ಆರ್‌ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಬೆಲೆ ₹ 20.9 ಲಕ್ಷ.

999 ಸಿಸಿ 4 ಸಿಲಿಂಡರ್‌ ಇನ್‌ ಲೈನ್ ಎಂಜಿನ್‌ ಹೊಂದಿದ್ದು, 11,000 ಆರ್‌ಪಿಎಂನಲ್ಲಿ 165ಅಶ್ವಶಕ್ತಿ ಹೊರಸೂಸಬಲ್ಲದು. 0–100 ಕಿ.ಮೀ ವೇಗ ಮುಟ್ಟಲು ಕೇವಲ 3.3 ಸೆಕೆಂಡ್‌ ತೆಗೆದುಕೊಳ್ಳಲಿದೆ.

ಚಾಲನಾ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಲು ಹೊಸ ಸಸ್ಪೆನ್ಶನ್‌ ವ್ಯವಸ್ಥೆ ಒಳಗೊಂಡಿದೆ.

ಎಲ್ಲಾ ರೀತಿಯ ಪ್ರಯಾಣಕ್ಕೂ ಸೂಕ್ತವಾಗಿದ್ದು, ಪ್ರತಿ ದಿನದ ರಸ್ತೆಯಲ್ಲಿ ರೇಸ್‌ ಟ್ರ್ಯಾಕ್‌ನಲ್ಲಿ ಚಲಾಯಿಸುವಂತಹ ಅನುಭವ ಕಟ್ಟಿಕೊಡಲಿದೆ ಎಂದು ಬಿಎಂಡಬ್ಲ್ಯು ಗ್ರೂಪ್‌ ಇಂಡಿಯಾದ ನಿಯೋಜಿತ ಅಧ್ಕ್ಷ ಅರ್ಲಿಂಡೊ ಟೆಕ್ಸಿರಾ ತಿಳಿಸಿದ್ದಾರೆ.

ಬಿಎಂಡಬ್ಲ್ಯು ಎಸ್ 1000 ಎಕ್ಸ್‌ಆರ್‌ನಲ್ಲಿ ಮೊದಲ ಬಾರಿಗೆ ಡೈನಮಿಕ್‌ ಬ್ರೇಕ್ ಅಸಿಸ್ಟಂಟ್‌ ಡೈನಮಿಕ್‌ ಬ್ರೇಕ್‌ ಕಂಟ್ರೋಲ್‌ ಅಳವಡಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು