ಸೋಮವಾರ, ಆಗಸ್ಟ್ 2, 2021
26 °C

ಬಿಎಂಡಬ್ಲ್ಯು ಎಕ್ಸ್‌6 ಕಾರ್‌ ಮಾರುಕಟ್ಟೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಜರ್ಮನಿಯ ವಿಲಾಸಿ ಕಾರು ತಯಾರಿಕಾ ಕಂಪನಿ ಬೆವರಿಯನ್ ಮೋಟರ್ ವರ್ಕ್ಸ್‌ನ (ಬಿಎಂಡಬ್ಲ್ಯು) ಭಾರತದ ಅಂಗ ಸಂಸ್ಥೆ ಬಿಎಂಡಬ್ಲ್ಯು ಗ್ರೂಪ್‌ ಇಂಡಿಯಾ ತನ್ನ  ಮೂರನೇ ತಲೆಮಾರಿನ ಹೊಸ  ಎಕ್ಸ್‌6 ಕಾರನ್ನು  ಮಾರುಕಟ್ಟೆಗೆ ಪರಿಚಯಿಸಿದೆ.

ಹೊಸ ವಿಲಾಸಿ ಕಾರ್‌ (ಸ್ಪೋರ್ಟ್ಸ್‌ ಆ್ಯಕ್ಟಿವಿಟಿ ಕೂಪ್‌–ಎಸ್‌ಎಸಿ) ಖರೀದಿಗೆ ಬಿಎಂಡಬ್ಲ್ಯು ಡೀಲರ್‌ಶಿಪ್‌ಗಳಲ್ಲಿ ಬುಕಿಂಗ್‌ ಮಾಡಬಹುದಾಗಿದೆ. ‘ಈ ’ಎಸ್‌ಎಸಿ’ ನಮ್ಮ ಗ್ರಾಹಕರಿಗೆ ವಿಶೇಷ ಚಾಲನಾ ಅನುಭವ ನೀಡಲಿದೆ. ಇದೇ ಮೊದಲ ಬಾರಿಗೆ ಗ್ರಾಹಕರ ವೈಯಕ್ತಿಕ ಬೇಡಿಕೆ ಮತ್ತು ಅಗತ್ಯಗಳಿಗೆ ತಕ್ಕಂತೆ ಈ ಕಾರ್‌ನಲ್ಲಿ ವಿಶೇಷ ಸೌಲಭ್ಯಗಳನ್ನು ಪರಿಚಯಿಸಲಾಗಿದೆ’ ಎಂದು ಕಂಪನಿಯ ಅಧ್ಯಕ್ಷ ಅರ್ಲಿಂಡೊ ತೆಸೆರಾ ಹೇಳಿದ್ದಾರೆ.

 ಇದು ಎಕ್ಸ್‌ಲೈನ್‌ ಮತ್ತು ಎಂ ಸ್ಪೋರ್ಟ್‌ ಮಾದರಿಗಳಲ್ಲಿಮತ್ತು ಆಕರ್ಷಕ ಬಣ್ಣಗಳಲ್ಲಿ ಲಭ್ಯ ಇದೆ. ಎಕ್ಸ್‌ ಷೋರೂಂ ಬೆಲೆ ₹ 95 ಲಕ್ಷ ಇದೆ. ಖರೀದಿದಾರರು ಮನೆಯಲ್ಲಿ ಕುಳಿತುಕೊಂಡೇ www.bmw-contactless.in ಅಂತರ್ಜಾಲ ತಾಣದ ಮೂಲಕ ಕಾರ್‌ ಖರೀದಿಸಬಹುದು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು