ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲದ ಬಡ್ಡಿದರ ಶೇ 0.10ರಷ್ಟು ತಗ್ಗಿಸಿದ ಬ್ಯಾಂಕ್‌ ಆಫ್‌ ಬರೋಡಾ

Last Updated 15 ಮಾರ್ಚ್ 2021, 12:19 IST
ಅಕ್ಷರ ಗಾತ್ರ

ಮುಂಬೈ: ಬ್ಯಾಂಕ್‌ ಆಫ್‌ ಬರೋಡಾ ರೆಪೊ ದರದ ಜೊತೆ ಜೋಡಣೆ ಆಗಿರುವ ಸಾಲದ ಮೇಲಿನ ಬಡ್ಡಿದರವನ್ನು ಶೇಕಡ 0.10ರಷ್ಟು ಇಳಿಕೆ ಮಾಡಿದೆ. ಇದರಿಂದಾಗಿ, ಗ್ರಾಹಕರಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವು ಶೇ 6.85ರಷ್ಟು ಇದ್ದಿದ್ದು, ಶೇ 6.75ಕ್ಕೆ ಇಳಿಕೆಯಾಗಿದೆ. ಇದು ಸೋಮವಾರದಿಂದಲೇ ಜಾರಿಗೆ ಬಂದಿದೆ.

ಬಡ್ಡಿದರ ಇಳಿಕೆಯಿಂದಾಗಿ ಗೃಹ ಸಾಲದ ಬಡ್ಡಿದರವು ಶೇ 6.75ರಿಂದ ಹಾಗೂ ಕಾರು ಸಾಲದ ಬಡ್ಡಿದರವು ಶೇ 7ರಿಂದ ಆರಂಭವಾಗಲಿದೆ. ಅಡಮಾನ ಸಾಲದ ಬಡ್ಡಿದರವು ಶೇ 7.95ರಿಂದ ಹಾಗೂ ಶಿಕ್ಷಣ ಸಾಲವು ಶೇ 6.75ರಿಂದ ಆರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

‘ಡಿಜಿಟಲ್‌ ಪ್ರಕ್ರಿಯೆಯ ಮೂಲಕ ಸಾಲ ನೀಡುವ ನಮ್ಮ ಪ್ರಯತ್ನ ಫಲವಾಗಿ ಗ್ರಾಹಕರಿಗೆ ಬಹಳ ಸುಲಭವಾಗಿ ಮತ್ತು ತ್ವರಿತವಾಗಿ ಅತ್ಯಂತ ಸ್ಪರ್ಧಾತ್ಮಕ ದರದಲ್ಲಿ ಸಾಲ ಪಡೆಯಲು ಅನುಕೂಲ ಆಗಲಿದೆ ಎಂದು ಭಾವಿಸುತ್ತೇವೆ’ ಎಂದು ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಹರ್ಷದ್‌ ಕುಮಾರ್ ಸೋಲಂಕಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT