ಬುಧವಾರ, ನವೆಂಬರ್ 20, 2019
22 °C

ಆರ್ಥಿಕತೆಗೆ ಶೀಘ್ರವೇ ಇನ್ನೊಂದು ಕೊಡುಗೆ

Published:
Updated:

ನವದೆಹಲಿ: ದೇಶಿ ಆರ್ಥಿಕತೆಯ ಪುನಶ್ಚೇತನಕ್ಕೆ ನೆರವಾಗಲು ಕೇಂದ್ರ ಸರ್ಕಾರ ಸದ್ಯದಲ್ಲೇ ಇನ್ನೊಂದು ಕೊಡುಗೆ ನೀಡಲಿದೆ.

ಉತ್ತೇಜನಾ ಕೊಡುಗೆಯ ನೀಲನಕ್ಷೆ ಸಿದ್ಧಗೊಂಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶೀಘ್ರದಲ್ಲಿಯೇ ಈ ಕೊಡುಗೆ ಪ್ರಕಟಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರ ನೀಡಲಾಗಿಲ್ಲ.

ಸರ್ಕಾರ ಈಗಾಗಲೇ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ), ರಿಯಲ್‌ ಎಸ್ಟೇಟ್‌ ಮತ್ತು ರಫ್ತು ವಲಯಕ್ಕೆ ಉತ್ತೇಜನಾ ಕೊಡುಗೆ ನೀಡಿದೆ. 10 ಬ್ಯಾಂಕ್‌ಗಳ ವಿಲೀನ ಪ್ರಕಟಿಸಿದೆ. ವಿದೇಶಿ ಹೂಡಿಕೆದಾರರ ಮೇಲಿನ ಸರ್ಚಾರ್ಜ್‌ ರದ್ದುಪಡಿಸಿದೆ.

ಪ್ರತಿಕ್ರಿಯಿಸಿ (+)