ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಷ್‌ ನಿವ್ವಳ ಲಾಭದಲ್ಲಿ ಕುಸಿತ

Last Updated 13 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಾಹನ ಬಿಡಿಭಾಗ ತಯಾರಿಸುವ ಪ್ರಮುಖ ಸಂಸ್ಥೆಯಾಗಿರುವ ಬಾಷ್‌, ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ₹ 279.95 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದಲ್ಲಿನ ಇದೇ ಅವಧಿಯಲ್ಲಿನ ₹ 430.98 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ, ಈ ಬಾರಿಯ ಲಾಭದ ಪ್ರಮಾಣ ಶೇ 35.04ರಷ್ಟು ಕಡಿಮೆಯಾಗಿದೆ.

ಈ ಅವಧಿಯಲ್ಲಿನ ಕಂಪನಿಯ ವರಮಾನವು ಕೂಡ ವರ್ಷದ ಹಿಂದಿನ ₹ 3,212 ಕೋಟಿಗಳಿಂದ ₹ 2,779 ಕೋಟಿಗೆ ಇಳಿಕೆಯಾಗಿದೆ.

‘ಆರ್ಥಿಕ, ತಾಂತ್ರಿಕ ಕಾರಣಗಳು, ಮಾರುಕಟ್ಟೆ ನಿಯಂತ್ರಣ ಕ್ರಮಗಳು ಮತ್ತು ವಿದ್ಯುತ್‌ ಚಾಲಿತ ವಾಹನಗಳಿಂದಾಗಿ ದೇಶಿ ವಾಹನ ತಯಾರಿಕಾ ವಲಯದಲ್ಲಿ ವ್ಯಾಪಕ ಬದಲಾವಣೆ ಕಂಡು ಬರುತ್ತಿದೆ. ಅದಕ್ಕೆ ಅನುಗುಣವಾಗಿ ಕಂಪನಿಯು ಹಲವಾರು ಬದಲಾವಣೆಗಳನ್ನು ಅಳವಡಿಸಿಕೊಳ್ಳುತ್ತಿದೆ. ಈ ಉದ್ದೇಶಕ್ಕೆ ₹ 82 ಕೋಟಿ ತೆಗೆದು ಇರಿಸಲಾಗಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸೌಮಿತ್ರ ಭಟ್ಟಾಚಾರ್ಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT