ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಕಂಪನಿಯು 50 ಸಾವಿರದಿಂದ 60 ಸಾವಿರದವರೆಗೆ ಹೊಸ ಮೊಬೈಲ್ ಟವರ್ಗಳನ್ನು ತನ್ನ ಜಾಲಕ್ಕೆ ಸೇರಿಸಲಿದೆ ಎಂದು ಕೇಂದ್ರ ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

ಕಂಪನಿಯ ಕಾರ್ಯಾಚರಣೆ ಲಾಭವು ಎರಡು ಅಂಕಿಗಳಲ್ಲಿ ಹೆಚ್ಚಳ ಕಾಣುವ ನಿರೀಕ್ಷೆ ಇದೆ ಎಂದೂ ಅವರು ಗುರುವಾರ ತಿಳಿಸಿದ್ದಾರೆ.

ಕಂಪನಿಯು ವರ್ಷವೊಂದರ ಗರಿಷ್ಠ ಮೊತ್ತದ ಬಂಡವಾಳ ವೆಚ್ಚವನ್ನು ಪೂರ್ಣಗೊಳಿಸಿದೆ. ₹20 ಸಾವಿರ ಕೋಟಿ ರೂಪಾಯಿ ಬಂಡವಾಳವನ್ನು ಕಂಪನಿಯು 4ಜಿ ಜಾಲ ನಿರ್ಮಾಣಕ್ಕೆ ವಿನಿಯೋಗಿಸಿದೆ. ಇದನ್ನು 5ಜಿ ಜಾಲವನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಅವರು ಹೇಳಿದ್ದಾರೆ.

‘ಇಂದು ಬಿಎಸ್ಎನ್ಎಲ್ನ ಒಂದು ಲಕ್ಷ ಟವರ್ಗಳು ಇವೆ... ಇವು 4ಜಿ ಆಧಾರಿತವಾಗಿವೆ. ಇವುಗಳನ್ನು ನೆಲೆಯಾಗಿ ಇರಿಸಿಕೊಂಡು ನಾವು ಜಾಲವನ್ನು ವಿಸ್ತರಿಸಲು ಮುಂದಾಗಿದ್ದೇವೆ’ ಎಂದು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಬಿಎಸ್ಎನ್ಎಲ್ ಕಂಪನಿಯ ಜಾಲವನ್ನು ಆತ್ಮನಿರ್ಭರ 4ಜಿ ಉಪಕರಣ ಬಳಸಿ ನಿರ್ಮಿಸಲಾಗಿದೆ. ಹೀಗಾಗಿ ಇದನ್ನು 5ಜಿಗೆ ಮೇಲ್ದರ್ಜೆಗೆ ಏರಿಸುವುದು ಕಷ್ಟದ ಕೆಲಸ ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ. 2024ರ ಜೂನ್ನಲ್ಲಿ ಕಂಪನಿಯು 8.55 ಕೋಟಿ ಬಳಕೆದಾರರನ್ನು ಹೊಂದಿತ್ತು, ಈಗ ಅವರ ಸಂಖ್ಯೆಯು 9.27 ಕೋಟಿಗೆ ಹೆಚ್ಚಾಗಿದೆ ಎಂದಿದ್ದಾರೆ.

18 ವರ್ಷಗಳ ನಂತರದಲ್ಲಿ ಕಂಪನಿಯು ತ್ರೈಮಾಸಿಕವೊಂದರಲ್ಲಿ ಲಾಭ ಕಂಡಿದೆ, ₹262 ಕೋಟಿ ಲಾಭ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.