ಶುಕ್ರವಾರ, ಡಿಸೆಂಬರ್ 6, 2019
20 °C

ಬಿಎಸ್‌ಎನ್‌ಎಲ್‌ ವಿಆರ್‌ಎಸ್‌ಗೆ 77 ಸಾವಿರ ಸಿಬ್ಬಂದಿ

Published:
Updated:
Prajavani

ನವದೆಹಲಿ: ಬಿಎಸ್‌ಎನ್‌ಎಲ್‌ನ 77 ಸಾವಿರಕ್ಕೂ ಅಧಿಕ ನೌಕರರು ಸ್ವಯಂ ನಿವೃತ್ತಿ ಯೋಜನೆಯನ್ನು (ವಿಆರ್‌ಎಸ್‌) ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ನಿರ್ದೇಶನದಂತೆ ಸಂಸ್ಥೆಯು ವಿಆರ್‌ಎಸ್‌ ಆಯ್ಕೆ ಮಾಡಿಕೊಳ್ಳಲು ನವೆಂಬರ್‌ 4 ರಿಂದ ಡಿಸೆಂಬರ್‌ 3ರ ಕಾಲಮಿತಿ ನಿಗದಿಪಡಿಸಿದೆ. 2020ರ ಜನವರಿ 31ರಿಂದ ಯೋಜನೆಯು ಅನ್ವಯವಾಗಲಿದೆ.

‘ವಿಆರ್‌ಎಸ್‌’ನಿಂದ ಸಂಸ್ಥೆಗೆ ₹ 7 ಸಾವಿರ ಕೋಟಿ ಉಳಿತಾಯವಾಗುವ ಅಂದಾಜು ಮಾಡಲಾಗಿದೆ.

ಸಂಸ್ಥೆಯಲ್ಲಿನ ಒಟ್ಟಾರೆ ಸಿಬ್ಬಂದಿ ಸಂಖ್ಯೆ 1.50 ಲಕ್ಷ ಇದೆ. ಇವರಲ್ಲಿ 1 ಲಕ್ಷ ಸಿಬ್ಬಂದಿ ಯೋಜನೆ ಆಯ್ಕೆ ಮಾಡಿಕೊಳ್ಳಲು ಅರ್ಹರಾಗಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು