ಶುಕ್ರವಾರ, ಅಕ್ಟೋಬರ್ 18, 2019
20 °C

14 ರಿಂದ ಬಜೆಟ್‌ಪೂರ್ವ ತಯಾರಿ

Published:
Updated:

ನವದೆಹಲಿ: 2020–21ನೆ ಹಣಕಾಸು ವರ್ಷದ ಕೇಂದ್ರ ಬಜೆಟ್‌ ರೂಪಿಸುವ ಪೂರ್ವಭಾವಿ ಸಿದ್ಧತೆಗೆ ಹಣಕಾಸು ಸಚಿವಾಲಯವು ಇದೇ 14ರಂದು ಚಾಲನೆ ನೀಡಲಿದೆ.

ನರೇಂದ್ರ ಮೋದಿ (2.0) ಸರ್ಕಾರದ ಎರಡನೆ ಬಜೆಟ್‌ ಇದಾಗಿದೆ. ಆರ್ಥಿಕ ಹಿಂಜರಿತ ಮತ್ತು ವರಮಾನ ಸಂಗ್ರಹದಲ್ಲಿನ ಕುಸಿತದಂತಹ ಗಂಭೀರ ಸ್ವರೂಪದ ವಿದ್ಯಮಾನಗಳನ್ನು ಸಮರ್ಥವಾಗಿ ಎದುರಿಸುವುದಕ್ಕೆ ಬಜೆಟ್‌ನಲ್ಲಿ ಪರಿಹಾರ ಕಂಡುಕೊಳ್ಳುವ ಸವಾಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಮುಂದೆ ಇದೆ.

Post Comments (+)