ನವದೆಹಲಿ: ಮುಂಗಾರು ಹಂಗಾಮಿನಲ್ಲಿ ಫಾಸ್ಪೇಟ್ ಹಾಗೂ ಪೊಟ್ಯಾಸಿಕ್ ರಸಗೊಬ್ಬರಗಳಿಗೆ ₹41,534 ಕೋಟಿ ಸಬ್ಸಿಡಿ ನೀಡಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಬ್ಸಿಡಿ ಪ್ರಮಾಣವು ಕಳೆದ ವರ್ಷಕ್ಕಿಂತ ಶೇ 12ರಷ್ಟು ಹೆಚ್ಚಾಗಿದೆ.

ಜೂನ್ ತಿಂಗಳಲ್ಲಿ ನೈಋತ್ಯ ಮುಂಗಾರು ಪ್ರವೇಶದೊಂದಿಗೆ ನಾಟಿ ಕೆಲಸಗಳು ಆರಂಭವಾಗಲಿವೆ. ‘2025ರ ಮುಂಗಾರು ಋತುವಿಗೆ ಹೋಲಿಸಿದರೆ ಸಬ್ಸಿಡಿ ಮೊತ್ತ ₹4,317 ಕೋಟಿ ಹೆಚ್ಚಳ ಆಗಿದೆ’ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗಾರರಿಗೆ ಇಲ್ಲಿ ತಿಳಿಸಿದರು.

ಸಂಪುಟದ ಇತರ ತೀರ್ಮಾನಗಳು:

ರಾಜಸ್ಥಾನದ ಜೈಪುರ ಮೆಟ್ರೊ ಎರಡನೇ ಹಂತಕ್ಕೆ ಅನುಮೋದನೆ. ಯೋಜನಾ ಮೊತ್ತ ₹13,037 ಕೋಟಿ.

ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿ 1,200 ಮೆಗಾವಾಟ್ ಕಲೈ-II ಜಲ ವಿದ್ಯುತ್ ಯೋಜನೆಯ ಅನುಷ್ಠಾನಕ್ಕೆ ₹14,105 ಕೋಟಿ ಹೂಡಿಕೆ ಪ್ರಸ್ತಾವನೆಗೆ ಅನುಮೋದನೆ.

ಅರುಣಾಚಲ ಪ್ರದೇಶದ ಕಮ್ಲೆ, ಕ್ರಾದಾಡಿ ಮತ್ತು ಕುರುಂಗ್ ಕುಮೆ ಜಿಲ್ಲೆಗಳಲ್ಲಿ ₹26,069 ಕೋಟಿ ವೆಚ್ಚದಲ್ಲಿ 1,720 ಮೆಗಾವಾಟ್ ಸಾಮರ್ಥ್ಯದ ಕಮಲಾ ಜಲ ವಿದ್ಯುತ್ ಯೋಜನೆ ಕಾರ್ಯಗತಕ್ಕೆ ಒಪ್ಪಿಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.