ಕೆನರಾ ಬ್ಯಾಂಕ್ ಎಫ್.ಡಿ ಮೇಲಿನ ಬಡ್ಡಿ ಹೆಚ್ಚಳ

ನವದೆಹಲಿ: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ ಮಂಗಳವಾರದಿಂದ ಜಾರಿಗೆ ಬರುವಂತೆ ತನ್ನ ನಿಶ್ಚಿತ ಠೇವಣಿಗಳ (ಎಫ್.ಡಿ.) ಮೇಲಿನ ಬಡ್ಡಿ ದರವನ್ನು ಶೇಕಡ 0.25ರವರೆಗೆ ಹೆಚ್ಚಿಸಿದೆ.
ಒಂದು ವರ್ಷದ ಎಫ್.ಡಿ. ಮೇಲಿನ ಬಡ್ಡಿ ದರವು ಶೇ 5.1ಕ್ಕೆ ಹೆಚ್ಚಾಗಿದೆ. 1–2 ವರ್ಷಗಳ ಅವಧಿಯ ಎಫ್.ಡಿ. ಮೇಲಿನ ಬಡ್ಡಿದರ ಶೇ 5 ಇದ್ದಿದ್ದು ಶೇ 5.15ಕ್ಕೆ ಹೆಚ್ಚಾಗಿದೆ. 2–3 ವರ್ಷಗಳ ಅವಧಿಗೆ ಬಡ್ಡಿ ದರವು ಶೇ 5.20ಕ್ಕೆ ತಲುಪಿದೆ.
3ರಿಂದ 5 ವರ್ಷಗಳ ಅವಧಿಗೆ ಶೇ 5.45ರಷ್ಟು ಬಡ್ಡಿ ದರ ನಿಗದಿಯಾಗಿದೆ (ಮೊದಲು ಶೇ 5.25 ಇತ್ತು). 5ರಿಂದ 10 ವರ್ಷಗಳ ಅವಧಿಯದ್ದಕ್ಕೆ ಶೇ 5.5ರಷ್ಟು ಬಡ್ಡಿದರ ನಿಗದಿ ಮಾಡಲಾಗಿದೆ. ಹಿರಿಯ ನಾಗರಿಕರು ಶೇ 0.50ರಷ್ಟು ಹೆಚ್ಚುವರಿ ಬಡ್ಡಿ ದರ ಪಡೆಯಬಹುದಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.